ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಮಾತೃಶ್ರೀಯವರಾದ ಶ್ರೀಮತಿ ಕಲ್ಯಾಣಿ ಶೆಟ್ಟಿ ಯವರು ಇಂದು ದೈವಾದೀನರಾಗಿದ್ದಾರೆ. ಮೃತರು ಉಳಿದೊಟ್ಟು ದಿವಂಗತ ಬಿರ್ಮು ಶೆಟ್ಟಿ ಅವರ ಮಗಳು, ಪಡ್ಯಾರ ಮನೆ ದಿವಂಗತ ಸೀತಾರಾಮ ಶೆಟ್ಟಿ ಅವರ ಪತ್ನಿಯಾಗಿದ್ದು ಇವರಿಗೆ 82ವರ್ಷ ಪ್ರಾಯವಾಗಿದ್ದು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಇಂದು ಮದ್ಯಾಹ್ನ ನಿಧನರಾಗಿದ್ದಾರೆ. ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ದಿನಾಂಕ 16-11-2022 ಬುಧವಾರ ಸಂಜೆ 6.00ಗಂಟೆಗೆ ಕೋಟೆಕಾರು ಬೀರಿ ಸಮೀಪದ ನೆತ್ತಿಲ ಮನೆಯಲ್ಲಿ ಮೃತರ ಅಂತಿಮ ವಿಧಿ ವಿಧಾನ ಗಳು ನಡೆದು ಬಳಿಕ ಅಂತ್ಯಕ್ರಿಯೆಯು ಮಾಡೂರಿನ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Check Also
ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …