ದಕ್ಷಿಣ ಕನ್ನಡ

ಪುತ್ತೂರು : ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ..!

ಪುತ್ತೂರು : ಫೆಬ್ರವರಿ ತಿಂಗಳಲ್ಲಿ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ  ಆರೋಪಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಈಶ್ವರಿ (45) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಆಕೆ ಕಳವು ನಡೆಸಿದ ಸುಮಾರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ …

Read More »

ಮಂಗಳೂರು: 25 ಲಕ್ಷ ಲಂಚ ಸ್ವೀಕಾರ – ಮುಡಾ ಕಮೀಷನರ್ ಲೋಕಾಯುಕ್ತ ಬಲೆಗೆ

ಮಂಗಳೂರು: ಉದ್ಯಮಿಯೊಬ್ಬರಿಂದ ಬರೋಬ್ಬರಿ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಮನ್ಸೂರ್ ಅಲಿ ಹಾಗೂ ಓರ್ವ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಸಾಗರ್ ರಿಯಾಲಿಟಿ ಪ್ರಮೋಟರ್ಸ್‌ನ ಮಾಲಕ ಗಿರಿಧರ್ ಶೆಟ್ಟಿ ಎಂಬವರು ಕುಡುಪು ಗ್ರಾಮದ ಸರ್ವೇ ನಂ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಮನಪಾ ವ್ಯಾಪ್ತಿಯ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸಲು ಯೋಜನೆ ಹಾಕಿದ್ದರು. ಮನಪಾ ಆಯುಕ್ತರು ಈ ಜಮೀನಿಗೆ ಟಿಡಿಆರ್ …

Read More »

ಬೆಳ್ತಂಗಡಿ ಮೂಲದ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ – 6 ಮಂದಿಯ ಬಂಧನ

ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣ ರಹಸ್ಯ ಬಯಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ತುಮಕೂರಿಗೆ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು. ಆದರೆ ಬಳಿಕ ಸುಟ್ಟ ಕಾರಿನಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. …

Read More »

ಉಳ್ಳಾಲ: ಅಕ್ರಮ ಮರಳು ಸಾಗಾಟ -ನಾಲ್ಕು ನಾಡ ದೋಣಿಗಳು ವಶಕ್ಕೆ

ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಗತೋಟದಲ್ಲಿನ ಖಾಸಗಿ ಜಾಗದ ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದ ಮರಳು ಮತ್ತು ಹೊಳೆಯಲ್ಲಿ ಮರಳು ಸಾಗಾಟ ನಡೆಸುತ್ತಿದ್ದ ನಾಲ್ಕು ನಾಡದೋಣಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಹೊಳೆಯಲ್ಲಿ ಸಾಗಾಟ ನಡೆಸಿ ನಾಗತೋಟ ನಿವಾಸಿ ಮಹಮ್ಮದ್‌ ಆಲಿ ಅವರ ಖಾಸಗಿ ಜಮೀನಿನಲ್ಲಿ ದಾಸ್ತಾನು ಇರಿಸಲಾಗುತ್ತಿತ್ತು.ಈ ಮರಳನ್ನು …

Read More »

ಮಂಗಳೂರು: ತುಳು ರಂಗಕರ್ಮಿ, ಮೇರುನಟ, ನಿರ್ದೇಶಕ ವಿ.ಜಿ ಪಾಲ್ ನಿಧನ

ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ವಿ.ಜಿ. ಪಾಲ್‌ ಎಂದೇ ಖ್ಯಾತರಾಗಿರುವ ರಂಗಕರ್ಮಿ, ಸಂಘಟಕ, ನಿರ್ದೇಶಕ ವೇಣುಗೋಪಾಲ್‌ ಟಿ. ಕೋಟ್ಯಾನ್‌ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಂಗಳೂರಿನ‌ ಬೊಕ್ಕಪಟ್ಣದಲ್ಲಿ 1946ರಲ್ಲಿ ಜನಿಸಿದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದ ಅವರು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಅವರು ಸುಮಾರು 3 ಸಾವಿರಕ್ಕೂ ಅಧಿಕ ‌ನಾಟಕಗಳಲ್ಲಿ ಅಭಿನಯಿಸಿದ್ದರು.ಇವರು ೧೦೧ ಸಿನಿಮಾಗಳಲ್ಲಿ ನಟಿಸಿದ್ದು, ದುಬೈ ಕೊಲ್ಲಿ ರಾಷ್ಟ್ರಗಳಿಗೆ ತುಳು ಸಿನಿಮಾ ಪರಿಚಯಿಸಿದ ಕೀರ್ತಿ ವಿ.ಜಿ. ಪಾಲ್‌ …

Read More »

ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ: ಇಲ್ಲಿನ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಕ್ಷ (28) ಮೃತಪಟ್ಟ ಯುವಕ. ಲೋಹಿತಾಶ್ವ ಅವರು ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಂ, ಪ್ರಮೋದ್, ದಯಾನಂದ ಅವರಿಂದಿಗೆ ಕಾರ್‌ನಲ್ಲಿ ಶಂಭೂರಿಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಸ್ನಾನಕ್ಕೆಂದು ನದಿಗೆ ಇಳಿದಿದ್ದರೂ ಲೋಹಿತಾಕ್ಷ ಅವರು ದಡದಲ್ಲಿ ಕುಳಿತಿದ್ದರು. ಅದರೆ ಸ್ನೇಹಿತರು ಸ್ನಾನ ಮಾಡಿ ಹಿಂದಿರುಗಿದ ವೇಳೆ ಅವರು ನೀರಿನಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ನದಿ ದಡದಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ …

Read More »

ಮಲ್ಪೆ: ಬೀಚ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಆರು ಮಂದಿ ಬಂಧನ

ಮಲ್ಪೆ: ಬಡಾನಿಡಿಯೂರು ಗ್ರಾಮದ ಕದಿಕೆ ಬೀಚ್‌ನ ಸಮುದ್ರ ತೀರದಲ್ಲಿ ನಸುಕಿನ ವೇಳೆ ಮದ್ಯ ಸೇವಿಸುತ್ತಿದ್ದ ಆರು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರಾತ್ರಿ ವೇಳೆ ಬೀಚ್‌ನಲ್ಲಿ ಮದ್ಯಪಾನ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಿಂದ ದಾಳಿ ನಡೆಸಿದ ಪೊಲೀಸರು ಸಂತೋಷ್(36), ಯಶವಂತ್ (39), ದಿಕ್ಷೀತ್(24), ಪ್ರಸಾದ್(28), ಲೊಕೇಶ್(39), ದೀರಜ್(33) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಯ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್‌ ಜಾಬೀರ್‌ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಜಾಬೀರ್‌ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ನಿವಾಸಿಯಾಗಿದ್ದಾನೆ.

Read More »

ನೋವು ಆಗಿರುವುದು ಸಹಜ, ಆ ನೋವುಗಳನ್ನು ನಾವೆಲ್ಲ ಇವತ್ತು ಮರೆತಿದ್ದೇವೆ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಪುತ್ತೂರಿನಲ್ಲಿ ಬಿಜೆಪಿ ಯಾವತ್ತೂ ಸೋಲೊದಿಲ್ಲ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ. ಬಿಜೆಪಿ ಜೊತೆ ಪುತ್ತಿಲ ಪರಿವಾರ ವಿಲೀನಗೊಂಡ ಬಳಿಕ ಮೊದಲ ಬಾರಿಗೆ ಪುತ್ತೂರು ಬಿಜೆಪಿ ಕಚೇರಿಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಈ ಹಿಂದೆ ಒಂದಷ್ಟು ಗೊಂದಲ ಆಗಿರುವುದು ಸಹಜ. ನಾನಿದನ್ನು ಒಪ್ಪಿಕೊಳ್ಳುತ್ತೇನೆ. ಎರಡು ಭಾಗಗಳಿಂದಲೂ ನೋವು ಆಗಿರುವುದು ಸಹಜ. ಆದರೆ ಆ ನೋವುಗಳನ್ನು ನಾವೆಲ್ಲ ಇವತ್ತು ಮರೆತಿದ್ದೇವೆ. ನಾವೆಲ್ಲ ಅಣ್ಣ ತಮ್ಮಂದಿರ ಮತ್ತು ಅಕ್ಕ …

Read More »

ದಕ್ಷಿಣ ಕನ್ನಡ: ಉಚಿತ ‘ಮೊಬೈಲ್ ಪೋನ್ ರಿಪೇರಿ ತರಬೇತಿ’ಗೆ ಅರ್ಜಿ ಆಹ್ವಾನ

 ದಕ್ಷಿಣ ಕನ್ನಡ: ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ಮೊಬೈಲ್ ಪೋನ್ ರಿಪೇರಿ ತರಬೇತಿಗೆ ಅರ್ಜಿಯನ್ನು ರುಡ್ ಸೆಟ್ ಸಂಸ್ಥೆಯಿಂದ ಕರೆಯಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಉಜಿರೆಯ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದಂತ ಸುರೇಶ್.ಎಂ ಅವರು, ಧರ್ಮಸ್ಥಳದ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗಾಗಿ ವಿವಿಧ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ದಿನಾಂಕ 04-04-2024 ರಿಂದ 03-05-2024ರವರೆಗೆ ಒಂದು ತಿಂಗಳವರೆಗೆ ರುಡ್ ಸೆಟ್ ಸಂಸ್ಥೆಯಿಂದ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತವಾಗಿ ಮೊಬೈರ್ ಪೋನ್ ರಿಪೇರಿ ತರಬೇತಿಯನ್ನು …

Read More »

You cannot copy content of this page.