ದೇಶ

ʻಮತದಾರರ ಪಟ್ಟಿʼಯೊಂದಿಗೆ ʻಆಧಾರ್ ಸಂಖ್ಯೆʼ ಕಡ್ಡಾಯವಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ

ನವದೆಹಲಿ: ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಈಗಾಗಲೇ ಸುಮಾರು 66.23 ಕೋಟಿ ಆಧಾರ್ ಕಾರ್ಡ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆದ್ರೆ, ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022 ರ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಚಂದ್ರಚೂಡ್ ಹೇಳಿದರು.ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಚುನಾವಣಾ ಸಮಿತಿಯ ಸಲ್ಲಿಕೆಗಳನ್ನು ಗಮನಿಸಿತು ಮತ್ತು ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು, …

Read More »

ಕೆನಡಾ ನಂಟು ಹೊಂದಿರುವ 43 ಕುಖ್ಯಾತ ಭಯೋತ್ಪಾದಕರ ಪಟ್ಟಿ ಬಿಡುಗಡೆ ಮಾಡಿದ NIA

ನವದೆಹಲಿ:ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯು(NIA) 43 ಕುಖ್ಯಾತ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಸಾರ್ವಜನಿಕಗೊಳಿಸಿದೆ, ಅವರಲ್ಲಿ ಕೆಲವರು ಕೆನಡಾದಲ್ಲಿ ನೆಲೆಸಿದ್ದಾರೆ. ವಿವಿಧ ಕ್ರಿಮಿನಲ್ ಅಪರಾಧಗಳಲ್ಲಿ ತೊಡಗಿರುವ ಆರೋಪ ಹೊತ್ತಿರುವ ಈ ವ್ಯಕ್ತಿಗಳು ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಭಾವಿಸಲಾಗಿದೆ. ಕೆಲವು ಶಂಕಿತರ ಚಿತ್ರಗಳನ್ನು ಎನ್‌ಐಎ ಸಾರ್ವಜನಿಕಗೊಳಿಸಿದೆ. ದೇಶದಿಂದ ಪಲಾಯನಗೈದಿರುವ ಮತ್ತು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾದ ಕೆಲವು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಎನ್‌ಐಎ ಸಾರ್ವಜನಿಕಗೊಳಿಸಿದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರಲ್ಲಿ ಅರ್ಶ್ ದಲ್ಲಾ, ಗೋಲ್ಡಿ ಬ್ರಾರ್, ಲಖ್ಬೀರ್ ಸಿಂಗ್ ಲಿಂಡಾ ಮುಂತಾದವರು ಸೇರಿದ್ದಾರೆ. ಪ್ರಸ್ತುತ ಕೆನಡಾದಲ್ಲಿ …

Read More »

ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಕರೆ, 14 ವರ್ಷದ ಬಾಲಕ ಅರೆಸ್ಟ್

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ14 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಬರೇಲಿಯ ಫತೇಗಂಜ್ ಪೂರ್ವದ ಇಟೌರಿಯಾ ನಿವಾಸಿಯಾಗಿರುವ 8 ನೇ ತರಗತಿ ವಿದ್ಯಾರ್ಥಿ ಸೆಪ್ಟೆಂಬರ್ 19 ರಂದು ಸಂಜೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಸೆಪ್ಟೆಂಬರ್ 21 ರಂದು ರಾಮ ಮಂದಿರವನ್ನು ಸ್ಫೋಟಿಸಲಾಗುವುದು ಎಂದು ಹೇಳಿದ್ದಾನೆ.   ಪೊಲೀಸರು ಆತನ ಹೆಸರು ವಿಳಾಸ ಕೇಳಿದಾಗ ಹೆದರಿ ಕರೆ ಡಿಸ್ ಕನೆಕ್ಟ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಲಕ್ನೋ …

Read More »

ಒಳ ಉಡುಪಿನಲ್ಲಿತ್ತು 2 ಕೋಟಿ ರೂಪಾಯಿ ಮೌಲ್ಯದ 3.9 ಕೆ.ಜಿ. ಚಿನ್ನ!

ನವದೆಹಲಿ: ವಿಮಾನನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವವರು ಸಿಕ್ಕಿಬೀಳುತ್ತಿರುವ ಪ್ರಕರಣಕ್ಕೆ ಇಂದು ಮತ್ತೊಂದು ಸೇರ್ಪಡೆ ಆಗಿದ್ದು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ.. ಎಐ ಏರ್​ಪೋರ್ಟ್ ಸರ್ವಿಸಸ್ ಲಿಮಿಟೆಡ್​ನ ಸಿಬ್ಬಂದಿಯೇ ಈ ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಶ್ರೀಲಂಕಾ ಮೂಲದ ಈ ವ್ಯಕ್ತಿಯನ್ನು ಸಿಐಎಸ್​ಫ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ಕಂಡುಬಂದ ಈ ವ್ಯಕ್ತಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಒಳ ಉಡುಪಿನಲ್ಲಿ ಅಡಗಿಸಿ ಇರಿಸಿಕೊಂಡಿದ್ದ 3.9 ಕೆ.ಜಿ. ತೂಕದ …

Read More »

ತಿಲಕ ಧರಿಸಲು ನಿರಾಕರಿಸಿದ ಸಿದ್ದರಾಮಯ್ಯ : ಬಿಜೆಪಿ ಟೀಕೆ

ಹೈದರಾಬಾದ್ : ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಹಣೆಗೆ ತಿಲಕ ಇಡಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ತೀವ್ರ ಟೀಕೆಗೆ ಗುರಿಯಾಗಿದೆ. ಸಿದ್ದರಾಮಯ್ಯ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.ಶನಿವಾರ ಸಿಡಬ್ಲ್ಯುಸಿ ಸಭಾಂಗಣಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಅವರಿಗೆ ಸ್ವಾಗತಕಾರಿಣಿ ಗಂಧದ ಬೊಟ್ಟು ಹಚ್ಚಿ ಆರತಿ ಮಾಡಲು ಮುಂದಾಗಿದ್ದಾಳೆ. ಆಗ ಸಿದ್ದರಾಮಯ್ಯ ಹಣೆಗೆ ತಿಲಕ ಇಡಲು ಬಿಡುವುದಿಲ್ಲ. ಸ್ವಾಗತಕಾರಿಣಿ ಆಗ ಆರತಿಯನ್ನಷ್ಟೇ ಮಾಡಿದ್ದಾರೆ. ಇದನ್ನು ಪಕ್ಕದಲ್ಲೇ ಇದ್ದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಹಾಗೂ ಇತರರು ಮೂಕಪ್ರೇಕ್ಷಕರಂತೆ ನೋಡುತ್ತಾರೆ.ಸಿದ್ದರಾಮಯ್ಯ ನಡೆಯನ್ನು ಟೀಕಿಸಿರುವ ಬಿಜೆಪಿ ವಕ್ತಾರ …

Read More »

ಶಿವನ ದೇವಸ್ಥಾನದಲ್ಲಿ ನಮಾಜ್ ಮಾಡಿದ ಮುಸ್ಲಿಂ ಮಹಿಳೆಯರ ಬಂಧನ

ಲಕ್ನೋ:ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಹಳೆಯ ಶಿವ ದೇವಾಲಯದಲ್ಲಿ ನಮಾಜ್ (ಇಸ್ಲಾಮಿಕ್ ಪೂಜೆ) ಸಲ್ಲಿಸಿದ ಆರೋಪದ ಮೇಲೆ ಮುಸ್ಲಿಂ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೂತಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರ್‌ಪುರ ಗ್ರಾಮದ ದೇವಸ್ಥಾನದಲ್ಲಿ ನಮಾಜ್ ಮಾಡಲು ಪ್ರೇರೇಪಿಸಿದ ಆರೋಪದ ಮೇಲೆ ಅವರು ಮೌಲ್ವಿ (ಇಸ್ಲಾಮಿಕ್ ಕಾನೂನಿನ ಶಿಕ್ಷಕ) ರನ್ನು ಸಹ ಬಂಧಿಸಿದ್ದಾರೆ. ಮೌಲ್ವಿ ಚಮನ್ ಷಾ ಅವರು ನಮಾಜ್ ಮಾಡಿದರೆ ಅದೃಷ್ಟ ಬರುತ್ತದೆ ಎಂದು ಭರವಸೆ ನೀಡಿದ ನಂತರ ಆರೋಪಿಗಳಾದ ಸಜಿನಾ (45) ಮತ್ತು ಅವರ ಪುತ್ರಿ …

Read More »

ಮಂಗಳೂರು ಕುಕ್ಕರ್ ಸ್ಪೋಟದ ರೂವಾರಿ ಅರಾಫತ್ ಅಲಿ ಅರೆಸ್ಟ್..!

ನವದೆಹಲಿ: ಶಿವಮೊಗ್ಗ ಮೂಲದ ಭಯೋತ್ಪಾದಕ ಸಂಚುಗಾರ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್​ಐಎ) ಪೊಲೀಸರು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮೂಲತಃ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ 2020ರ ಬಳಿಕ ತಲೆಮರೆಸಿಕೊಂಡಿದ್ದ. ನೈರೋಬಿಯಾದಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಾಗ ಎನ್​ಐಎ ಬಲೆಗೆ ಬಿದ್ದಿದ್ದಾನೆ. ಈತ ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ, ಮಂಗಳೂರು ಕುಕ್ಕರ್ ಬಂದ್ ಸ್ಪೋಟದ , ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಪೋತ ನಡೆಸುವ ಸಲುವಾಗಿ ಕುಕ್ಕರ್ …

Read More »

ಜಿ-20 ಶೃಂಗಸಭೆಯಲ್ಲೂ ‘INDIA’ ಬದಲಿಗೆ ‘BHARAT’ ನಾಮಫಲಕ ಪ್ರದರ್ಶನ

ದೇಶದ ಹೆಸರು ಬದಲಾವಣೆ ವಿಚಾರ ಭಾರಿ ಚರ್ಚೆಯಲ್ಲಿದ್ದು, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಕೂಡ ‘ಭಾರತ್’ ಹೆಸರಿನ ಪ್ರಸ್ತಾಪ ಬಂದಿದೆ. ಹೌದು, ಶನಿವಾರ ಇಂದು ನಡೆಯುತ್ತಿರುವ ಜಿ 20 ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗ ದೇಶದ ಹೆಸರನ್ನು ‘ಭಾರತ್’ ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿ ‘BHARAT’ ಎಂದು ಪ್ರದರ್ಶಿಸಲಾಯಿತು. ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ, ಪ್ರಧಾನಿ ಮೋದಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ …

Read More »

ಬೈಕ್‌ನಲ್ಲಿ ಪ್ರಯಾಣ- ವಿಶ್ವದ ಅತಿ ಎತ್ತರದ ಉಮ್ಲಿಂಗ್‌ ಲಾ ಗೆ ತಲುಪಿದ ಸುಳ್ಯದ ದಂಪತಿ

ಸುಳ್ಯ,: ಉದ್ಯಮಿ ಯೊಬ್ಬರು ಬುಲೆಟ್‌ ಬೈಕ್‌ನಲ್ಲಿ ಪತ್ನಿ,ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್‌ ಪ್ರದೇಶ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇವರು ಸುಳ್ಯದ ಹಳೆಗೇಟಿನ ತೌಹೀದ್‌ ರೆಹ್ಮಾನ್‌ ಅವರು ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್‌ ರೆಹ್ಮಾನ್‌ ಅವರು ಬುಲೆಟ್‌ನಲ್ಲಿ ಉಮ್ಮಿಂಗ್‌ ಲಾ ತೆರಳಿದ್ದರೂ. ಸುಮಾರು 19,024 ಅಡಿ ಎತ್ತರದ ಮತ್ತು ಆಮ್ಲಜನಕದ ಮಟ್ಟವು 50 ಶೇ. ಕ್ಕಿಂತ ಕಡಿಮೆ ಇರುವ ಈ ಸ್ಥಳಕ್ಕೆ ರೆಹ್ಮಾನ್‌ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯವರು ಎನಿಸಿಕೊಂಡಿದ್ದಾರೆ. ಇಂಡಿಯಾ ರೆಕಾರ್ಡ್‌ ಬುಕ್‌ನಲ್ಲಿ ಈ ದಾಖಲೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.ಲಡಾಕ್‌ನ ಚೀನದ …

Read More »

ಬೆಳ್ಳಂಬೆಳಗ್ಗೆ ಆಂಧ್ರ‌ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್|

ಸಿಐಡಿ ಪೊಲೀಸರು ಬೆಳ್ಳಂ ಬೆಳಗ್ಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದು, ಬಂಧನದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಚಂದ್ರಬಾಬು ಬಂಧಿಸಲು ಪೊಲೀಸರು ಹೋಗಿದ್ದು, ಭಾರಿ ಹೈಡ್ರಾಮಾ ನಡೆದ ನಂತರ ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ.ಬಂಧನದ ವೇಳೆ ವಾಗ್ಧಾಳಿ ನಡೆಸಿ ಚಂದ್ರಬಾಬು ನಾಯ್ಡು ‘ ಸಿಐಡಿ ಪೊಲೀಸರು ನನ್ನ ಹಕ್ಕನ್ನು ಕಸಿಯುವ ಕೆಲಸ ಮಾಡಿದ್ದಾರೆ.ಎಫ್ ಐ ಆರ್ ಮಾಡಿಲ್ಲ, ಯಾವುದೇ ನೋಟಿಸ್ ನೀಡಿಲ್ಲ. ಯಾಕೆ ನನ್ನನ್ನು ಬಂಧಿಸುತ್ತೀರಾ..? ಎಂದು ವಾಗ್ಧಾಳಿ ನಡೆಸಿದರು. ಆಂಧ್ರದ ನಂದ್ಯಾಲದ ಫಂಕ್ಷನ್ ಹಾಲ್ ನಲ್ಲಿ …

Read More »

You cannot copy content of this page.