ತಿಲಕ ಧರಿಸಲು ನಿರಾಕರಿಸಿದ ಸಿದ್ದರಾಮಯ್ಯ : ಬಿಜೆಪಿ ಟೀಕೆ

ಹೈದರಾಬಾದ್ : ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಹಣೆಗೆ ತಿಲಕ ಇಡಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ತೀವ್ರ ಟೀಕೆಗೆ ಗುರಿಯಾಗಿದೆ. ಸಿದ್ದರಾಮಯ್ಯ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.ಶನಿವಾರ ಸಿಡಬ್ಲ್ಯುಸಿ ಸಭಾಂಗಣಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಅವರಿಗೆ ಸ್ವಾಗತಕಾರಿಣಿ ಗಂಧದ ಬೊಟ್ಟು ಹಚ್ಚಿ ಆರತಿ ಮಾಡಲು ಮುಂದಾಗಿದ್ದಾಳೆ. ಆಗ ಸಿದ್ದರಾಮಯ್ಯ ಹಣೆಗೆ ತಿಲಕ ಇಡಲು ಬಿಡುವುದಿಲ್ಲ. ಸ್ವಾಗತಕಾರಿಣಿ ಆಗ ಆರತಿಯನ್ನಷ್ಟೇ ಮಾಡಿದ್ದಾರೆ. ಇದನ್ನು ಪಕ್ಕದಲ್ಲೇ ಇದ್ದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಹಾಗೂ ಇತರರು ಮೂಕಪ್ರೇಕ್ಷಕರಂತೆ ನೋಡುತ್ತಾರೆ.ಸಿದ್ದರಾಮಯ್ಯ ನಡೆಯನ್ನು ಟೀಕಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ಮಮತಾ ದೀದಿಯ ನಂತರ ಈಗ ಸಿದ್ದರಾಮಯ್ಯ ತಿಲಕ ಧಾರಣೆಗೆ ನಿರಾಕರಿಸಿದ್ದಾರೆ. ಟೋಪಿ (ಮುಸ್ಲಿಂ ಟೋಪಿ) ಹಾಕುವುದು ಸರಿ. ಆದರೆ ತಿಲಕ ಧಾರಣೆ ಸರಿ ಅಲ್ಲವೆ? ಏಕೆಂದರೆ ಮುಂಬಯಿಯಲ್ಲಿ ಹಿಂದೂಗಳು ಮತ್ತು ಸನಾತನ ಧರ್ಮದ ಮೇಲೆ ದಾಳಿ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ ಎಂದಿದ್ದಾರೆ.ಉದಯನಿಧಿ ಸ್ಟಾಲಿನ್‌ನಿಂದ ಎ. ರಾಜಾ ಹಾಗೂ ಜಿ. ಪರಮೇಶ್ವರರರಿಂದ ಪ್ರಿಯಾಂಕ್ ಖರ್ಗೆವರೆಗೆ, ಆರ್‌ಜೆಡಿಯಿಂದ ಎಸ್‌ಪಿವರೆಗೆ ‘ಕರೋ ಹಿಂದೂ ಆಸ್ಥಾ ಪೆ ಚೋಟ್, ಔರ್ ಕೋ ವೋಟ್‌ ಬ್ಯಾಂಕ್ ಕಾ ವೋಟ್’ (ಹಿಂದೂ ನಂಬಿಕೆಗೆ ಘಾಸಿ ಮಾಡುವುದು, ಮತ ಬ್ಯಾಂಕ್‌ಗೆ ಮಣೆ ಹಾಕುವುದು) ತಂತ್ರ ಇದಾಗಿದೆ ಎಂದು ಛೇಡಿಸಿದ್ದಾರೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.