ನವದೆಹಲಿ: ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ಮುಖವಾಗಿದ್ದ ಮತ್ತು ‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ಸಿದ್ಧಾಂತ್ ಸೂರ್ಯವಂಶಿ ಅವರು ಶುಕ್ರವಾರ ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ .
ಈ ಬಗ್ಗೆ ಸ್ಥಳೀಯ ವರದಿಗಳ ಪ್ರಕಾರ, ನಟ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅವರು ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಖ್ಯಾತ ಛಾಯಾಗ್ರಾಹಕ ವಿರಲ್ ಭಯಾನಿ ಅವರು ಈ ಸುದ್ದಿಯನ್ನು ಹಂಚಿಕೊಂಡಿದ್ದು, ‘ಈ ಹಿಂದೆ ಆನಂದ್ ಸೂರ್ಯವಂಶಿ ಎಂದು ಕರೆಯಲ್ಪಡುತ್ತಿದ್ದ ನಟ #siddhantsuryavanshi ಬಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ನಮಗೆ ದೊರೆತ ಆರಂಭಿಕ ಸುದ್ದಿಯ ಪ್ರಕಾರ, ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಅವರಿಗೆ ಹೃದಯಾಘಾತವಾಗಿದೆ. ನಾವು ಈ ವರ್ಷ ಸಾಕಷ್ಟು ಯುವಕರನ್ನು ಕಳೆದುಕೊಂಡಿದ್ದೇವೆ. ಅವನು ತನ್ನ ಹೆಂಡತಿ ಅಲೆಸಿಯಾಳೊಂದಿಗೆ ಹಲವಾರು ಬಾರಿ ಅವನನ್ನು ಭೇಟಿ ಮಾಡಿದ್ದೆ, ಆತ ಫಿಟ್ ಆಗಿದ್ದ ಆತನಿಗೆ ಏಕೆ ಹೀಗೆ ಆಯ್ತು ಎಂದು ನನಗೆ ತಿಳಿದಿಲ್ಲ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ.’
ಸಿದ್ಧಾಂತ್ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ನಿಂದ ಸಿದ್ಧಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.