ದೊಡ್ಡ ಸಾಮಗರ ನಾಲ್ಮೊಗ – ಗ್ರಂಥ ಲೋಕಾರ್ಪಣೆ

ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ, “ದೊಡ್ಡ ಸಾಮಗರ ನಾಲ್ಮೊಗ” ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗ್ರಹದಲ್ಲಿ ಜೂನ್ 29 ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಕಾಸರಗೋಡಿನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಪುಸ್ತಕವನ್ನು ಅನಾವರಣಗೊಳಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಮಾಹೆಯ ಸಹಕುಲಾಧಿಪತಿಗಳಾದ ಡಾ. ಹೆಚ್ ಎಸ್ ಬಲ್ಲಾಳರು ವಹಿಸಿಕೊಳ್ಳಲಿದ್ದು ಶುಭಾಶಂಸನೆಯನ್ನು ಸಾಮಗರ ಸಹಕಲಾವಿದರಾದ ಡಾ. ಪ್ರಭಾಕರ ಜೋಶಿಯವರು ಮತ್ತು ಪುಸ್ತಕ ಪರಿಚಯವನ್ನು ಪ್ರೊ ಮುರಳೀಧರ ಉಪಾಧ್ಯ ಹಿರಿಯಡ್ಕ ಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಶ್ರೀ ಪ್ರಮೋದ್ ಮಧ್ವರಾಜ್ ( ಮಾಜಿಸಚಿವರು ), ಡಾ. ನಾರಾಯಣ ಸಭಾಹಿತ ( ಸಹಕುಲಾಧಿಪತಿಗಳು ಮಾಹೆ, ಪ್ರೊ ನೀತಾ ಇನಾಂದಾರ್ ( ಪ್ರಧಾನ ಸಂಪಾದಕರು, ಮಣಿಪಾಲ ಯುನಿವರ್ಸಲ್ ಪ್ರೆಸ್, ಹಾಗೂ ಶ್ರೀ ಪ್ರದೀಪ ಕುಮಾರ್ ಕಲ್ಕೂರ್ ( ಅಧ್ಯಕ್ಷರು ಕಸಾಪ ದ. ಕ.) ಮತ್ತು ಡಾ. ಕೋಳ್ಯೂರು ರಾಮಚಂದ್ರ ರಾವ್ ಭಾಗವಹಿಸಲಿರುವರು.

ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ – “ ಶಲ್ಯ ಸಾರಥ್ಯ” ವನ್ನು ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ಮತ್ತು ವಿ|| ಹಿರಣ್ಯ ವೆಂಕಟೇಶ ಭಟ್ ಇವರು ನಡೆಸಿಕೊಡಲಿರುವರು.

ಕಲಾಭಿಮಾನಿಗಳೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ, ಸಂಯೋಜಕರಾದ ಎಂ. ಎಲ್. ಸಾಮಗರು ವಿನಂತಿ ಸಿಕೊಂಡಿದ್ದಾರೆ.

Check Also

ಉಡುಪಿ:ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಗ್ಗೆ 7ಗಂಟೆ …

Leave a Reply

Your email address will not be published. Required fields are marked *

You cannot copy content of this page.