ಉಡುಪಿ: ಗಣೇಶ ಚತುರ್ಥಿ ಹಿನ್ನಲೆ ಪೋಲಿಸರಿಂದ ಪಥಸಂಚಲನ

ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಪೊಲೀಸ್ ರಿಂದ ಪಥ ಸಂಚಲನವು ಸೋಮವಾರ ಉಡುಪಿ ನಗರದಲ್ಲಿ ನಡೆಯಿತು.ಉಡುಪಿ ಉಪ ವಿಭಾಗದ ಡಿವೈಎಸ್ಪಿ ದಿನಕರ್ ಪಿ.ಕೆ. ನೇತೃತ್ವದಲ್ಲಿ ಉಡುಪಿ ನಗರ, ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿ, ಕೆಎಸ್ಆರ್ಟಿಸಿ ತುಕುಡಿ ಸೇರಿದಂತೆ ಒಟ್ಟು ನೂರಕ್ಕೂ ಅಧಿಕ ಪೊಲೀಸರು ಈ ಪಥಸಂಚನಲದಲ್ಲಿ ಪಾಲ್ಗೊಂಡಿದ್ದರು.

ನಗರದ ಬನ್ನಂಜೆಯಿಂದ ಆರಂಭಗೊಂಡ ಪತಸಂಚಲವು ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಕೆ ಎಮ್ ಮಾರ್ಗದಲ್ಲಿ ಸಾಗಿ ಮದರ್ ಆಫ್ ಸೋರ್ಸ್ ಚರ್ಚಿನ ಎದುರುಗಡೆ ಸಮಾಪ್ತಿಗೊಂಡಿತು. ಇದರಲ್ಲಿ ಉಡುಪಿ ನಗರ ಪೊಲೀಸ್ ನಿರೀಕ್ಷಕ ಮಂಜಪ್ಪ, ಮಲ್ಪೆ ವೃತ್ತ ಪೋಲಿಸ್ ನಿರೀಕ್ಷಕ ಮಂಜುನಾಥ್ ಮೊದಲಾದವರು ಹಾಜರಿದ್ದರು.

Check Also

ಎಸ್ಸೆಸ್ಸೆಲ್ಸಿ ಫಲಿತಾಂಶ : ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯ

ಬೆಂಗಳೂರು: 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 6,31,204 (76.91%) ಫಲಿತಾಂಶ ಸಾಧಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ …

Leave a Reply

Your email address will not be published. Required fields are marked *

You cannot copy content of this page.