ಉಡುಪಿ:  ಅಯೋಧ್ಯೆ ಬಾಲರಾಮನಿಗೆ ತೊಟ್ಟಿಲು ಸೇವೆ – ರಘುಪತಿ ಭಟ್ ಕೊಡುಗೆ

ಡುಪಿ: ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯಾ ರಾಮನ ಸನ್ನಿಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಶ್ರೀಗಳ ಮಾರ್ಗದರ್ಶನದಂತೆ ಶ್ರೀಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ರಜತ ಪಲ್ಲಕ್ಕಿಯನ್ನು ಅರ್ಪಿಸಲು ಸಿದ್ದರಾಗುತ್ತಿರುವಂತೆ ಇತ್ತ ಕಡೆ ಮಂಡಲೋತ್ಸವದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್‌ ಅವರು ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸಲು ಉತ್ಸುಕರಾಗಿದ್ದಾರೆ.

ರಾಜಸ್ಥಾನದಲ್ಲಿ ಬೀಟಿಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠರಚನೆಗಳುಳ್ಳ ತೊಟ್ಟಿಲನ್ನು ಖರೀದಿಸಲಾಗಿದ್ದು, ಇದೀಗ ಅಯೋಧ್ಯೆಯತ್ತ ಹೊರಟಿದೆ.

ಫೆ. 6 ರ ಸಂಜೆ ತೊಟ್ಟಿಲು ಅಯೋಧ್ಯೆ ತಲುಪಿ, 7 ರಂದು ಸಂಜೆಯ ಉತ್ಸವದಲ್ಲಿ ಶ್ರೀಗಳ ಮೂಲಕ ಇದರ ಅರ್ಪಣೆಯಾಗಲಿದ್ದು, ನೂತನ ತೊಟ್ಟಿಲಲ್ಲಿ ಶ್ರೀಬಾಲರಾಮನಿಗೆ ತೊಟ್ಟಿಲು ಸೇವೆ ನಡೆಸಲಾಗುವುದು ಎಂದು ಭಟ್ ತಿಳಿಸಿದ್ದಾರೆ.

ಅಯೋಧ್ಯೆ ಶ್ರೀರಾಮ ದೇವರ ಮಂಡಲೋತ್ಸವದಲ್ಲಿ ತೊಟ್ಟಿಲು ಸೇವೆಗೆ ರಾಜಸ್ಥಾನದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಸುಂದರ ದಾರುಶಿಲ್ಪದ ತೊಟ್ಟಿಲು ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರ ಸೇವಾರ್ಥ ಫೆ. 7ರಂದು ಸಮರ್ಪಣೆಯಾಗಲಿದೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.