Recent Posts

ಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸೋದು ಸುರಕ್ಷಿತ- ಇಂಡಿಯನ್‌ ಆಯಿಲ್‌ ಸ್ಪಷ್ಟನೆ..!

ನವದೆಹಲಿ: ಕಡುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸೋದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಇಂಡಿಯನ್‌ ಆಯಿಲ್‌ ಸ್ಪಷ್ಟಪಡಿಸಿದೆ. ಕಡುಬೇಸಿಗೆಯಲ್ಲಿ ವಾಹನಗಳಿಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್‌, ಡೀಸೆಲ್‌ ಹಾಕಿಸಬೇಡಿ ಎಂದು ವಾಹನ ಸವಾರರಿಗೆ ಇಂಡಿಯನ್‌ ಆಯಿಲ್‌ ಕಂಪನಿ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಕಂಪನಿ ಸ್ಪಷ್ಟೀಕರಣ ನೀಡಿದೆ. ಆಟೋಮೊಬೈಲ್ ತಯಾರಕರು ಕಾರ್ಯಕ್ಷಮತೆಯ ಅಗತ್ಯತೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಅಂಶಗಳೊಂದಿಗೆ ಸುತ್ತುವರಿದ ಪರಿಸ್ಥಿತಿಗಳ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ …

Read More »

ಕಾರ್ಕಳ: ಟೆರೇಸಿನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಕ್ಕೆ ಬಿದ್ದು ಸಾವು

ಅಜೆಕಾರು: ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸಿನಲ್ಲಿ ಮಲಗಿದ್ದ ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅಜೆಕಾರು ಬೊಂಡುಕುಮೇರಿ ಆಶ್ರಯ ನಗರ ನಿವಾಸಿ ಸುಂದರ್‌ ನಾಯ್ಕ (55) ಮೃತ ಶಿಕ್ಷಕ. ಅವರು ರಾತ್ರಿ ಸುಮಾರು 10.30ರ ವೇಳೆಗೆ ಟೆರೇಸಿನಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಮನೆಯವರು ನೋಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಗಾಢ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ.

Read More »

ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ದೆಹಲಿ: ಕೇಂದ್ರ ಸರಕಾರ ದೇಶದಾದ್ಯಂತ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸಿದೆ. ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಹಾಗೂ ದೇಶದ ಭದ್ರತೆ ದೃಷ್ಠಿಯಿಂದ ಆಧಾರ್ ಕಾರ್ಡ್‌ನ್ನು ಜಾರಿಗೊಳಿಸಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಮಾಡಲು, ಹೊಸ ಆಧಾರ್‌ ಮಾಡಿಸಲು ಸೈಬರ್ ಸೆಂಟರ್ ಗಳು ಸರಕಾರಿ ಕಛೇರಿಗಳ ಮುಂದೆ ಮುಗಿ ಬೀಳುತ್ತಾರೆ. ಇದೀಗ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಯಾಕಂದ್ರೆ ಇದೀಗ ನಾಯಿಗಳಿಗೂ ಆಧಾರ್ ಹೊಂದಿರಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆಯಂತೆ. …

Read More »

You cannot copy content of this page.