Recent Posts

ಉಡುಪಿ: ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಸಿಬಂದಿ

ಉಡುಪಿ: ರೈಲಿನಲ್ಲಿ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಅಭಿಮನ್ಯು ಎಂಬವರು ಮುಂಬೈಯಿಂದ ಮಂಗಳೂರಿಗೆ ತೆರಳಲು ಟಿಕೆಟ್ ಮಾಡಿದ್ದರು. ಆದರೆ ಅಚಾತುರ್ಯದಿಂದ ಅವರು ಪಟ್ನಾ ವಾಸ್ಕೋ ರೈಲನ್ನು ಹತ್ತಿದ್ದರು. ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಕಾರಣ ಅವರು ರೈಲು ಹೊರಡಲು ವೇಳೆ ಇಳಿಯಲು ಯತ್ನಿಸಿದರು. ಇದರ ಪರಿಣಾಮ ಅವರು ಆಯತಪ್ಪಿ ಬಿದ್ದರೆನ್ನಲಾಗಿದೆ. ಕೂಡಲೇ ಅದೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಡಗಾಂವ್ ಮಂಗಳೂರು ರೈಲಿನ ಟಿಟಿಇ ಉದಯ್ ಎಂ.ನಾಯ್ಕ ಆತನನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು ಎಂದು ಕೊಂಕಣ ರೈಲ್ವೇಯ …

Read More »

ಪಡುಬಿದ್ರಿ: ಕರ್ತವ್ಯಕ್ಕೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯ ಕರಿಮಣಿ ಸರ ಕಸಿದು ಪರಾರಿ

ಉಡುಪಿ: ಸ್ಕೂಟರ್‍ ನಲ್ಲಿ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಯುವಕರಿಬ್ಬರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ನಡೆದಿದೆ. ಪಡುಬಿದ್ರಿಯ ಇನ್ನಾ ಗ್ರಾಮದ ಹೊಸಕಾಡು ಎಂಬಲ್ಲಿ ನಡೆದಿದೆ. ಹೊಸಕಾಡು ನಿವಾಸಿ ರೇಖಾ (40) ಅವರ 39 ಗ್ರಾಂ ಕರಿಮಣಿ ಸರವನ್ನು, ವಿಳಾಸ ಕೇಳುವ ನೆಪದಲ್ಲಿ, ಅಪರಿಚಿತ ಯುವಕರಿಬ್ಬರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಹೆಲ್ಮೆಟ್ ಧರಿಸಿದ್ದ ಮೋಟಾರು ಬೈಕ್ ಸವಾರ ಪೂರ್ವ ಸನ್ನದ್ದನಾಗಿ ಬೈಕ್ ನಲ್ಲಿ ಕುಳಿತಿದ್ದ. ಹಿಂಬದಿ ಸವಾರ ರೇಖಾ ಅವರ ಬಳಿ ನಿಲ್ಲಿಸಿ ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ಬಂದು …

Read More »

ಮಳಲಿ ಮಸೀದಿ ವಿವಾದ: ವಿಹೆಚ್​ಪಿಗೆ ಮೊದಲ ಗೆಲುವು​..!!

ಮಂಗಳೂರು: ಮಳಲಿ ಮಸೀದಿ ಜಾಗದ ವಿವಾದಕ್ಕೆ ಸಂಬಂದಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಇದರೊಂದಿಗೆ ಈ ಕೇಸ್ ನಲ್ಲಿ ಹಿಂದೂ ಸಂಘಟನೆಗಳಿಗೆ ಮೊದಲ ಗೆಲವು ದೊರೆತಂತಾಗಿದೆ. ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಮತ್ತು ವಿಎಚ್​ಪಿ ಅರ್ಜಿ ವಜಾ ಮಾಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿಯೇ ಅರ್ಜಿಯ ವಿಚಾರಣೆ ನಡೆಯಲಿದೆ. ಕೋರ್ಟ್ ಕಮಿಷನರ್ ನೇಮಿಸಿ, ಮಸೀದಿ ಸರ್ವೇ ನಡೆಸಬೇಕು ಎಂದು ವಿಎಚ್​ಪಿ ತನ್ನ ಅರ್ಜಿಯಲ್ಲಿ …

Read More »

You cannot copy content of this page.