ಬಹು ದಿನಗಳ ಬಳಿಕ ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಭೇಟಿ ಆಗುವ ಸಮಯ ಹತ್ತಿರ ಆಗಿದೆ. ಈ ಭೇಟಿಯಲ್ಲಿ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ರೂಪೇಶ್ ತಿಳಿಸಿದ್ದಾರೆ.
ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯ ಅವರು ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ದಯವಿಟ್ಟು ಬದಲಾಗಬೇಡ. ನನಗಾಗಿ ಕಾದಿರು ಎಂದು ಸಾನ್ಯ ಬಳಿ ರೂಪೇಶ್ ಮನವಿ ಮಾಡಿಕೊಂಡಿದ್ದರು. ಈಗ ದೊಡ್ಮನೆಯ ಹೊರಗೆ ಸಾನ್ಯರನ್ನ ಭೇಟಿ ಮಾಡುವ ಸಮಯ ಹತ್ತಿರ ಆಗಿದೆ. ಭೇಟಿ ಆದಾಗ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ಅವರು ದೊಡ್ಮನೆ ಒಳಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ದಿವ್ಯಾ ಮತ್ತು ರಾಜಣ್ಣ, ರೂಪೇಶ್‌ಗೆ ಪ್ರಶ್ನೆ ಮಾಡಿದ್ದಾರೆ.
ಸಾನ್ಯ ಅಯ್ಯರ್ ಹತ್ತಿರ ರೂಪೇಶ್ ಶೆಟ್ಟಿ ಅವರು, ಹೇಗಿದ್ದೀಯಾ? ಎಂದು ಹೇಳಿ ಹಗ್ ಮಾಡಿಕೊಳ್ತೀನಿ. ನನ್ನನ್ನು ಎಷ್ಟು ಮಿಸ್ ಮಾಡಿಕೊಂಡೆ ನನ್ನ ಬಗ್ಗೆ ಇರುವ ಕಾಳಜಿ, ಪ್ರೀತಿ ಎಲ್ಲ ಹಾಗೆ ಇದೆಯಾ ಈಗ ಏನು ಮಾಡುತ್ತಿದ್ದೀಯಾ ಪ್ರಾಜೆಕ್ಟ್ಗಳು ಬಂತಾ ನಾನು ಸಾನ್ಯ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿದ್ದೆ, ಆ ಅನುಭವ ಇದೆ, ಹೊರಗಡೆ ಸಾನ್ಯ ಅವರನ್ನು ನಾನು ನೋಡಿಲ್ಲ. ನನ್ನ ಮೇಲೆ ಬಿಗ್ ಬಾಸ್ ಮನೆಯಲ್ಲಿ ಇದ್ದ ಅಭಿಪ್ರಾಯ ಈಗ ಹಾಗೆ ಇದೆಯಾ ಎಂಬ ಮುಂತಾದ ಪ್ರಶ್ನೆಗಳನ್ನು ಕೇಳಲಿದ್ದೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಇನ್ನೂ ದಿವ್ಯಾ ಉರುಡುಗ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ, ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ ನಡುವೆ ಪೈಪೋಟಿ ಮುಂದುವರೆದಿದೆ. ಯಾರಾಗಲಿದ್ದಾರೆ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಎಂದು ಕಾದುನೋಡಬೇಕಿದೆ.