ಕಾರವಾರ: ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಎರಡು ವರ್ಷಗಳ ನಂತರ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇದರಿಂದ ಕರಾವಳಿ ಭಾಗದ ಪ್ರವಾಸಿತಾಣಗಳಲ್ಲಿ ಕೊರೊನಾ ಭೀತಿ ಎದುರಾಗಿದೆ.ಉತ್ತರ ಕನ್ನಡ ಜಿಲ್ಲೆ ಎಂದಾಕ್ಷಣ ಕಡಲತೀರ, ಪ್ರಕೃತಿ ಸೌಂದರ್ಯ ದೇಶ ವಿದೇಶಿಗರನ್ನು ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ ಜಿಲ್ಲೆಯ ಜನರಿಗೆ ಪ್ರವಾಸಿಗರೇ ಸಂಕಷ್ಟವಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಿಗರ ದಂಡು ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಹರಿದುಬರುತ್ತಿದೆ. ಜೊತೆಗೆ ಗೋವಾ ಗಡಿಯಾದ್ದರಿಂದ ವಿದೇಶಿ ಪ್ರವಾಸಿಗರು ಸಹ ಕಾರವಾರ, ಗೋಕರ್ಣ, ಮುರುಡೇಶ್ವರಕ್ಕೆ ಲಗ್ಗೆ ಇಡುತ್ತಿದ್ದು, ಇದು ಕರಾವಳಿ ಭಾಗದ ಜನರಲ್ಲಿ ಕೊರೊನಾ ಆತಂಕ ಮೂಡಿಸಿದೆ.