
ಉಡುಪಿ: ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಿಷನ್ ಕಾಂಪೌಂಡ್ ಬಳಿಯ ನಿವಾಸಿ ಇಗ್ನೇಶೀಯಸ್ ಮಾರ್ಕ್ ಸಲ್ಡಾನ್ಹಾ (58) ಅವರು 2 ವರ್ಷಗಳಿಂದ ಉಡುಪಿ ರೆಸಿಡೆನ್ಸಿಯಲ್ಲಿ ಸಪ್ಲಾಯರ್ ಕೆಲಸ ಮಾಡಿಕೊಂಡಿದ್ದು, ತಮಗಿದ್ದ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದು ಆ. 27ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.