
ಡುರಾಂಗೊ: ಎರಡು ಖಾಸಗಿ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ಮೆಕ್ಸಿಕನ್ ಉತ್ತರ ರಾಜ್ಯದ ಡುರಾಂಗೊದಲ್ಲಿ ನಡೆದಿದೆ.
ರಾಜ್ಯ ಭದ್ರತಾ ಸಚಿವಾಲಯದ ಪ್ರಕಾರ, ಡಿಕ್ಕಿ ಹೊಡೆದುಕೊಂಡ ಎರಡು ವಿಮಾನಗಳು ಸೆಸ್ನಾ ವಿಮಾನಗಳಾಗಿದ್ದು, ಒಂದು ಟೇಕ್ ಆಫ್ ಆಗುವಾಗ ಮತ್ತು ಮತ್ತೊಂದು ಇಳಿಯುವಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಿಮಾಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಮಗು ಸೇರಿ ಐವರು ಸಾವನ್ನಪ್ಪಿದ್ದಾರೆ. ಸದ್ಯ ಈ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ.