ಮಂಗಳೂರು: ಅಪ್ರಾಪ್ತ ಹಿಂದೂ ಬಾಲಕಿಯನ್ನು ಅನ್ಯ ಕೋಮಿನ ಇಬ್ಬರು ಯುವಕರು ಅಪಹರಿಸಿ ಪುತ್ತೂರು ವಿಟ್ಲ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅಳಕಮಜಲು ಸಮೀಪದ ನಿನ್ನಿಕಲ್ಲು ಗುಡ್ಡಕ್ಕೆ ಕರೆದುಕೊಂಡು ಹೋಗಿರುವುದಾಗಿ ಬಾಲಕಿಯ ಪೋಷಕರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಕಾರದ ವತಿಯಿಂದ ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಕಂಪ್ಯೂಟರ್ ಶಿಕ್ಷಣ ಆಯೋಜಿಸಲ್ಲಾಗಿದ್ದು ಅಲ್ಲಿಗೆ ಸಂತ್ರಸ್ತ ಯುವತಿ ಎಂದಿನಂತೆ ತೆರಳಿದ್ದಳು. ಒಬ್ಬ ಅಪ್ರಾಪ್ತ ಬಾಲಕನ ಸಹಿತ ಇಬ್ಬರು ಯುವಕರು ಆ ಬಾಲಕಿಯನ್ನು ಪುಸಲಾಯಿಸಿ ಅಲ್ಲಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ.
ಇನ್ನು ಗುಡ್ಡದಲ್ಲಿ ನಿನ್ನೆ ಸಂಜೆ ಪತ್ತೆಯಾದ ಮುಸ್ಲಿಂ ಯುವತಿ ಕಬಕದ ಮೀನು ವ್ಯಾಪಾರಿಯೊಬ್ಬರ ಪುತ್ರಿ. ಆಕೆ ಮುಸ್ಲಿಂ ಯುವಕರಿಗೆ ಹಿಂದೂ ಬಾಲಕಿಯನ್ನು ಪರಿಚಯಿಸಿ ಸ್ನೇಹ ಸಲುಗೆ ಬೆಳೆಸಲು ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾಳೆ ಎಂದು ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.