ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಮತ್ತೊಂದು ಲವ್‌ಜಿಹಾದ್ ಸಿದ್ಧವಾಗಿದೆ ಹಿಂದೂ ಯುವತಿಯೊಂದಿಗೆ ಬೆಂಗಳೂರಿನ ಮುಸ್ಲಿಂ ಯುವಕ ವಿವಾಹವಾಗಿರುವ ಸಂದೇಶ ಸೋಷಿಯಲ್ ಮಿಡಿಯಾಗಳಲ್ಲಿ ರವಾನೆಯಾಗುತ್ತಿದೆ. ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ
ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಪುತ್ತೂರು ಮೂಲದ ಹಿಂದೂ ಯುವತಿಯೊಂದಿಗೆ ಬೆಂಗಳೂರಿನ ಮುಸ್ಲಿಂ ಯುವಕರೊಬ್ಬರು ವಿವಾಹವಾಗುವುದಾಗಿ ವಿವಾಹ ನೋಂದಾಣಿ ಕಚೇರಿಯಲ್ಲಿ ಅಳವಡಿಸಿರುವ ಆಕ್ಷೇಪಣಾ ಸಲ್ಲಿಸಲು ಮಾಹಿತಿ ಇರುವ ನೋಟೀಸ್‌ವೊಂದು ಸಾಮಾಜಿಕ ಜಾಲಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.
ಪುತ್ತೂರು ಮೂಲದವರಾಗಿದ್ದು ಇದೀಗ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಅಕ್ಷತಾ ಕೆ. ಅವರು ಬೆಂಗಳೂರಿನ ನ್ಯಾಪನಹಳ್ಳಿ ನಿವಾಸಿ ಶೇಖ್ ಮಹಮ್ಮದ್ ಸಲೀಮ್ ಅವರನ್ನು ವಿವಾಹ ಆಗುವುದಾಗಿ ಬೆಂಗಳೂರಿನ ವಿವಾಹ ನೋಂದಾಣಿಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವಿವಾಹ ನೋಂದಾಣೆ ಕಚೇರಿಯಲ್ಲಿ ವಿವಾಹಕ್ಕೆ ಅವಕಾಶ ನೀಡುವ ಮೊದಲು ಯಾರಿಂದಲಾದರೂ ಆಕ್ಷೇಪಣೆ ಇದೆಯೇ ಎಂಬ ಕುರಿತು 30 ದಿನದ ನೋಟೀಸ್ ಅನ್ನು ಕಚೇರಿಯಲ್ಲಿ ಅಳವಡಿಸಿದ್ದರು. ಆ ನೋಟೀಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ್‌ಜಿಹಾದ್ ಎಂದು ಆರೋಪಿಸಿದ್ದಾರೆ.