ಮಂಗಳೂರು: ಕುಕ್ಕರ್ ಸ್ಫೋಟದ ರೂವಾರಿ ಬಂಧನ‌ ಪ್ರಕರಣ: ತನಿಖೆಯಲ್ಲಿ‌ ಮತ್ತೊಂದು ಮಾಹಿತಿ ಬಹಿರಂಗ

ಮಂಗಳೂರು: ಮಂಗಳೂರು ಕುಕ್ಕರ್ ಸ್ಫೋಟದ ರೂವಾರಿ ಐಸಿಸ್ ಉಗ್ರ ಅರಾಫತ್ ಅಲಿನನ್ನು ಎನ್​ಐಎ ಬಂಧಿಸಿ ತೀವ್ರ ವಿಚಾರಣೆಗೊಳಪಿಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗವಾಗಿದೆ.

ತೀರ್ಥಹಳ್ಳಿ ಬರ್ದರ್ಸ್ ಕಾನ್ಸೆಪ್ಟ್ ಹುಟ್ಟು ಹಾಕಿದ್ದೆ ಅಬ್ದುಲ್ ಮತೀನ್ ಅಂತೆ. ಎನ್​ಐಎ ಮೋಸ್ಟ್ ವಾಂಟೇಡ್ ನಲ್ಲಿರುವ ಅಬ್ದುಲ್ ಮತೀನ್, 2014 ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದ. ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಈ ವೇಳೆ 2020 ರಲ್ಲಿ ಮಾಜ್ ಮುನೀರ್, ಶಾರೀಕ್ ಹಾಗೂ ಅರಾಫತ್ ಅಲಿ ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಇವರನ್ನು ಅಬ್ದುಲ್ ಮತೀನ್ ಸಂಪರ್ಕ ಮಾಡಿದ್ದ. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ನಂತರ ಅಲ್ಲಿಂದ ಶಾರೀಕ್ ಹಾಗೂ ಮಾಜ್ ಮುನೀರ್ ಗೆ ಉಗ್ರವಾದದ ಪಾಠ ಮಾಡುತ್ತಿದ್ದ. ಇವರಿಗೆ ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದ. ಬಳಿಕ ನೀಡಿದ ಮೊದಲ ಟಾರ್ಗೇಟ್ ಕದ್ರಿ ದೇವಸ್ಥಾನದಲ್ಲಿ ಸ್ಫೋಟ. ಆದ್ರೆ ಮೊದಲ‌ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ತೀರ್ಥಹಳ್ಳಿ ಬ್ರದರ್ಸ್ ಆಗುವ ಕನಸು ಆರಂಭದಲ್ಲಿ ದಾರಿ ತಪ್ಪಿತ್ತು. ಹೀಗಾಗಿಯೇ ಅರಾಫತ್ ಅಲಿ ವಾಪಸ್ಸು ಇಂಡಿಯಾಗೆ ಬಂದಿದ್ದ ಎನ್ನುವ ಅಂಶ ಎನ್​ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಭಯೋತ್ಪಾದನಾ ಸಂಚು ಪ್ರಕರಣದ ಪ್ರಮುಖ ಆರೋಪಿ ಅರಾಫತ್ ಅಲಿಯನ್ನು ಎನ್ಐಎ ಸೆಪ್ಟೆಂಬರ್ 14ರಂದು ಬಂಧಿಸಿದೆ.

Check Also

ಸುಳ್ಯ: ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಢಿಕ್ಕಿ- ಕಾರು ಜಖಂ

ಸುಳ್ಯ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಡಿರುವ ಘಟನೆ ಸುಳ್ಯ ಗಾಂಧಿನಗರ …

Leave a Reply

Your email address will not be published. Required fields are marked *

You cannot copy content of this page.