ಉಡುಪಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಮಾಹೆ ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಲಿದ್ದು, ಆ ಪ್ರಯುಕ್ತ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಆದಿ ಉಡುಪಿಯ ಹೆಲಿಪ್ಯಾಡ್‌ನಿಂದ ಮಣಿಪಾಲದ ವರೆಗೆ ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್ ಮಾಡಲಾಗುತ್ತಿದೆ. ಉಡುಪಿಯಲ್ಲಿ ಎನ್ ಎಸ್ ಜಿ ಮತ್ತು ಜಿಲ್ಲಾ ಪೊಲೀಸರು ಬೀಡುಬಿಟ್ಟಿದ್ದಾರೆ. 100ರಿಂದ 150 ಮಂದಿ ಜಿಲ್ಲೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರವರೆಗೆ ನಗರದಾದ್ಯಂತ ಬಿಗು ಪೊಲೀಸ್ ಭದ್ರತೆ ಇರಲಿದೆ.