ಬಸ್ ನಲ್ಲಿ ಫ್ರೀ ಪ್ರಯಾಣ: ಮಹಿಳೆಯರ ನೂಕು ನುಗ್ಗಲು; ಗಲಾಟೆಯಲ್ಲಿ ಕಿತ್ತು ಬಂತು ಬಸ್ ನ ಡೋರ್

ಚಾಮರಾಜನಗರ: ಬಸ್ ನಲ್ಲಿ ಫ್ರೀ ಪ್ರಯಾಣಕ್ಕೆ ಮಹಿಳೆಯರು ನೂಕು ನುಗ್ಗಲು ಉಂಟು ಮಾಡಿ ಬಸ್ ನ ಡೋರ್ ಕಿತ್ತು ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್​ ರಸ್​ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲನ್ನೇ ಮಹಿಳಾಮಣಿಗಳು ಮುರಿದು ಹಾಕಿದ್ದಾರೆ.ಏಕಾಏಕಿ ಬಸ್​ ಡೋರ್​ ಮುರಿದು ಬಂದ ಕಾರಣ ಬಸ್ ಕಂಡಕ್ಟರ್​ ದಿಕ್ಕು ತೋಚದಾಗಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲಾಗಿವೆ.

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.