ಯುವಕನ ಮೇಲೆ ನಾಲ್ವರು ಹುಡುಗಿಯರಿಂದ ಅತ್ಯಾಚಾರ?

ಲಂಧರ್: ಪಂಜಾಬ್‌ನ ಜಲಂಧರ್‍ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 20ರ ಹರೆಯದ ನಾಲ್ವರು ಹುಡುಗಿಯರು ತನ್ನನ್ನು ಅಪಹರಿಸಿ ನಂತರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ. ಇದು ಕೇಳಲು ವಿಚಿತ್ರ ಎನಿಸಿದರೂ ನಿಜವಾಗಿಯೂ ನಡೆದಿರುವ ಘಟನೆ.

ನಾಲ್ವರು ಯುವತಿಯರು ನನ್ನ ಕಣ್ಣಿಗೆ ರಾಸಾಯನಿಕ ಸಿಂಪಡಿಸಿ, ನಂತರ ಕಿಡ್ನಾಪ್ ಮಾಡಿ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಅರಣ್ಯ ಪ್ರದೇಶದಲ್ಲಿ ನನಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾನೆ. ನಂತರ ಆ ವ್ಯಕ್ತಿಯನ್ನು ಯುವತಿಯರು ನಗರ ಪ್ರದೇಶದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದರಂತೆ.

ಮದುವೆಯಾಗಿ ಮಕ್ಕಳಿರುವ ಸಂತ್ರಸ್ತ ವ್ಯಕ್ತಿ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಎಸಗಲು ತನ್ನನ್ನು ಯುವತಿಯರು ಅಪಹರಿಸಿದ್ದಾರೆಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಕಪುರ್ತಲಾ ರಸ್ತೆಯ ಬಳಿ ಮನೆಗೆ ತೆರಳುತ್ತಿದ್ದ ನನ್ನನ್ನು ಯುವತಿಯರು ವಿಳಾಸ ಕೇಳಿದರು. ನಾನು ಹೇಳುತ್ತಿದ್ದ ವೇಳೆ ಕಣ್ಣಿಗೆ ಏನನ್ನೋ ಎರಚಿದರು. ನಾನು ಪ್ರಜ್ಞಾಹೀನನಾದ ಬಳಿಕ ತಮ್ಮ ಕಾರಿನಲ್ಲಿ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಬಳಿಕ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.

ಕುಡಿದ ಮತ್ತಿನಲ್ಲಿದ್ದ ನಾಲ್ವರು ಯುವತಿಯರು ಒಬ್ಬರ ಮೇಲೊಬ್ಬರಂತೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನನಗೂ ಸಹ ಬಲವಂತದಿಂದ ಮದ್ಯ ಕುಡಿಸಿ ಹಲ್ಲೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಳಿಕ ನನ್ನನ್ನು ನಗರದ ಯಾವುದೋ ಸ್ಥಳದಲ್ಲಿ ಬಿಟ್ಟು ಯುವತಿಯರು ಪರಾರಿಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವ್ಯಕ್ತಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಪಂಜಾಬ್ ಪೊಲೀಸ್ ಗುಪ್ತಚರ ಇಲಾಖೆ ಈ ಬಗ್ಗೆ ಸ್ವಯಂಪ್ರೇರಿತ ತನಿಖೆ ಪ್ರಾರಂಭಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವ್ಯಕ್ತಿ ಈ ರೀತಿ ದೂರು ನೀಡಿಲ್ಲ. ತನ್ನ ಮೇಲೆ ನಡೆದಿರುವ ಅತ್ಯಾಚಾರ ದೌರ್ಜನ್ಯದ ಬಗ್ಗೆ ಆತ ಮಾಧ‍್ಯಮಗಳಿಗೆ ಮಾಹಿತಿ ನೀಡಿದ್ದಾನೆ.

Check Also

BIG NEWS: ವಿಧಾನಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ‘ಸಿಎಂ ಆಸನ’ದ ಮೇಲೆ ಕುಳಿತು ಮಹಾ ಯಡವಟ್ಟು

ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡೋದಕ್ಕೆ ವಿಧಾನಸಭೆಯ ಸದನಕ್ಕೆ ತೆರಳಿದ್ದಂತ ಮೂಡುಗೆರೆ ಶಾಸಕಿ ನಯನಾ ಮೋಟಮ್ಮ …

Leave a Reply

Your email address will not be published. Required fields are marked *

You cannot copy content of this page.