ಕಾಪು: ಕಾಪು ಲೈಟ್ ಹೌಸ್ ಬೀಚ್ ಬಳಿ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಹೈದರಾಬಾದ್ ಮೂಲದ ಇಬ್ಬರನ್ನು ರಕ್ಷಿಸಲಾಗಿದೆ.
ನವೀನ್ (25) ಮತ್ತು ಸಾಯಿತೇಜ (27) ರಕ್ಷಣೆಗೊಳಗಾದ ಪ್ರವಾಸಿಗರು. ಗುರುವಾರ ಸಂಜೆ ಕಾಪು ಬೀಚ್‌ಗೆ ಬಂದಿದ್ದ ಹೈದರಾಬಾದ್‌ನ ಇಬ್ಬರು ಯುವಕರು ಮತ್ತು ಓರ್ವ ಯುವತಿ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ಸಂದರ್ಭ ಅವರನ್ನು ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿ ಅವರನ್ನು ನೀರಿನಿಂದ ಮೇಲಕ್ಕೆ ಕಳುಹಿಸಿದ್ದರು. ಎರಡು ಮೂರು ಸಾರಿ ಹೇಳಿದ್ದರೂ ನಿರ್ಲಕ್ಷಿಸಿ ಲೈಟ್ ಹೌಸ್‌ನ ಬಂಡೆಯ ಮೇಲೆ ಹೋಗಿದ್ದ ಯುವಕರು ಕಲ್ಲಿನಲ್ಲಿ ಜಾರುತ್ತಾ ಸಮುದ್ರದೊಳಗೆ ಬಿದ್ದಿದ್ದರು. ಲೈಫ್ ಗಾರ್ಡ್‌ಗಳು ನೀರು ಪಾಲಾಗುತ್ತಿದ್ದ ಯುವಕರನ್ನು ರಕ್ಷಿಸಿದ್ದಾರೆ.