ಕುಂಬಳೆ : ಕಾಸರಗೋಡು ಕುಲಾಲ ಸಂಘ ಕುಂಬಳೆ ಶಾಖೆಯಲ್ಲಿ ತಾ.15-01-2023 ರಂದು ಕುಲಾಲ ಕುಟುಂಬ ಸಂಗಮ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜರಗಿತು.
ಶಾಖೆಯ ಅಧ್ಯಕ್ಷರಾದ ಶ್ರೀ ಗಂಗಾಧರ ಕೆ.ಟಿ ಯವರು ಅಧ್ಯಕ್ಷತೆ ವಹಿಸಿದ್ದು, ಶ್ರೀ ರವೀಂದ್ರ ಮುನ್ನಿಪ್ಪಾಡಿ, ಅಧ್ಯಕ್ಷರು ಜಿಲ್ಲಾ ಕುಲಾಲ ಸಂಘ ಕಾಸರಗೋಡು ಇವರು ದೀಪ ಬೆಳಗಿಸಿ ಕಾರ್ಯಕ್ರಮ ದ ಉದ್ಘಾಟನೆ ಗೈದರು, ಮುಖ್ಯ ಅತಿಥಿಗಾಳಾದ ಶ್ರೀ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪ್ರಧಾನ ಕರ್ಮಿ ಶ್ರೀ ಮಂತ್ರ ಮೂರ್ತಿ ಗುಳಿಗ ಸನ್ನಿಧಿ ಉಪ್ಲೇರಿ ಇವರು ಕುಟುಂಬ ಸಂಗಮದ ಮಹತ್ವ ಹಾಗೂ ಕುಲಾಲ ಸಮುದಾಯಕ್ಕೆ ಸಮಾಜದಲ್ಲಿರುವ ಮಹತ್ವದ ಬಗ್ಗೆ ಮಾತನಾಡಿದರು.
ಹಾಗು ಮುಖ್ಯ ಅತಿಥಿಗಳಾದ ಶ್ರೀಮತಿ ಕುಶಲಾಕ್ಷಿ. ವಿ.ಕುಲಾಲ್ ಕಣ್ವತೀರ್ಥ .ತುಲು ಸಾಹಿತಿ,ಶ್ರೀಮತಿ ಕಮಲಾಕ್ಷಿ ವರ್ಕಾಡಿ. ಸಧಸ್ಯರು ಕಾಸರಗೋಡು ಜಿಲ್ಲಾ ಪಂಚಾಯತ್, ಶ್ರೀಮತಿ ಜಯಂತಿ,ಸಧಸ್ಯರು ಕಾಸರಗೋಡು ಬ್ಲೋಕ್ ಪಂಚಾಯತ್,ಶ್ರೀ ನಾರಾಯಣ ಕುಲಾಲ್ ನಾರಾಯಣಮಂಗಲ.ಇವರುಗಳು ಶುಭಹಾರೈಸಿದರು.ಸಭೆರಲ್ಲಿ ಕುಲಾಲ ಸಮಾಜದ ಹಿರಿಯ ಸಾಧಕರಾದ ಶ್ರೀ ಶೇಷಪ್ಪ ಮೂಲ್ಯ ಮುಜುಂಗಾವು.ಸಮಾಜದ ಗುರಿಕ್ಕಾರ ,ಶ್ರೀ ಕುಂಙ ಮೂಲ್ಯ ತಂಙರಕಟ್ಟ ಹಿರಿಯ ಕೃಷಿಕ, ಶ್ರೀ ಕಿಞ್ಞಣ್ಣ ಮೂಲ್ಯ ನಾರಾಯಣಮಂಗಲ,ಆಯುರ್ವೇದ ವೈದ್ಯರು,ಶ್ರೀ ಯು,ಎಮ್ ಮೂಲ್ಯ ಓಡಗದ್ದೆ.ಮಾಜಿ ಸೈನಿಕರು,ಶ್ರೀ ಸಂಕಪ್ಪ ಮಾಸ್ಟರ್ ನಾಯ್ಕಾಪು.ಹಿರಿಯ ಸಮಾಜ ಸಂಘಟಕರು. ಇವರುಗಳನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಕುಲಾಲ ಪ್ರತಿಭೆಗಳಿಂದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗ ನಡೆಯಿತು .ಕುಲಾಲ ಬಾಂದವರ ಸಹ ಬೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕುಮಾರಿಯರಾದ ತನ್ವಿ ,ಸಾನ್ವಿ,ಪ್ರತೀಕ್ಷಾ ಭವ್ಯಕೃತಿ, ಚರಿಷ್ಮಾ ಇವರುಗಳು ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮ ವನ್ನು ಶ್ರೀ ಕೃಷ್ಣ ಕಳತ್ತೂರು ಸ್ವಾಗತಿಸಿ,ಶ್ರೀ ಅಶೋಕ ಪುಣಿಯೂರು ವಂದಿಸಿದರು, ಶ್ರೀ ಶ್ರೀನಿವಾಸ ಕಮಾರ್ತೆ. ಕಾರ್ಯಕ್ರಮ ನಿರೂಪಿಸಿದರು.