

ಕುಂದಾಪುರ: ಫೈಯರ್ ಬ್ರಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ಅರೆಸ್ಟ್ ಆಗಿ ಮೂರು ದಿನಗಳಾಗಿವೆ.ಸದ್ಯ ಆಕೆ ಸಿಸಿಬಿ ವಶದಲ್ಲಿದ್ದಾಳೆ. ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕನ್ ಸಾಲ್ ರಸ್ತೆಯಲ್ಲಿ ಚೈತ್ರಳ ಮನೆ ಇದೆ. ಮನೆಯಲ್ಲಿ ತಾಯಿ ರೋಹಿಣಿ ವಾಸವಾಗಿದ್ದಾರೆ. ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ , ‘ನನ್ನ ಮಗಳು ಅಂಥವಳಲ್ಲ.ಯಾರಿಗೂ ನೋವು ನೀಡುವವಳಲ್ಲ.ಯಾರೋ ಅವಳನ್ನು ಮುಂದಿಟ್ಟು ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ನಿನ್ನೆ ಮನೆಯಲ್ಲಿದ್ದ ಚೈತ್ರ ತಾಯಿ ರೋಹಿಣಿ ಇವತ್ತು ಮನೆಯಲ್ಲಿಲ್ಲ. ಇಂದು ಮುಂಜಾನೆಯೇ ಮನೆಗೆ ಬೀಗ ಹಾಕಿ ಕಾರ್ಯಕ್ರಮ ಇದೆ ಎಂದು ನೆರೆಮನೆಯವರ ಬಳಿ ಹೇಳಿ ಹೊರಗೆ ಹೋಗಿದ್ದಾರೆ.