
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯದಲ್ಲಿ ಯಾವುದೇ ಪರವಾನಿಗೆ ಇಲ್ಲದೇ 5 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ವೇಳೆ ವಾಹನ ವೇಳೆ ಅಡ್ಡಗಟ್ಟಿ ಗೋಕಳ್ಳರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಿಹಾದಿಗಳ ಬೆಂಡೆತ್ತಿದ ಪ್ರಕರಣದ ಕೆಲ ದಿನಗಳ ಹಿಂದೆ ನಡೆದಿತ್ತು. ಮುಳಿಯ ಎಂಬಲ್ಲಿಂದ 5 ಜಾನುವಾರುಗಳನ್ನು ಖರೀದಿ ಮಾಡಿಕೊಂಡು ಕಜೆ ಎಂಬಲ್ಲಿಗೆ ಗೂಡ್ಸ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನ ಅಡ್ಡಗಟ್ಟಿ ನಾಲ್ಕು ಜನರನ್ನು ಎಳೆದು ಹಾಕಿ ಮಾರಣಾಂತಕ ಹಲ್ಲೆ ನಡೆಸಿ ಗೋ ಸಾಗಾಟದ ವಾಹನವನ್ನು ತಡೆದಿದ್ದಾರೆ ಎಂಬುವುದಾಗಿ ವಿಟ್ಲ ಠಾಣೆಯಲ್ಲಿ ಅ .ಕ್ರ 143/2023 ಕಲಂ:341,307,324,323,506,143,147,148,ಜೊತೆಗೆ 149 ಐಪಿಸಿ ಯಂತೆ ಪ್ರಕರಣ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲೊಬ್ಬರಾದ ಅಕ್ಷಯ್ ರಜಪೂತ್ ಅವರಿಗೆ ಮಂಗಳೂರಿನ ಎರಡನೇ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಮೀನು ಮಂಜೂರು ಮಾಡಿದೆ. ಮಂಗಳೂರಿನ ಖ್ಯಾತ ವಕೀಲರಾದ ಕಿಶೋರ್ ಕುಮಾರ್ ಅಕ್ಷಯ್ ರಜಪೂತ್ ಪರ ವಾದ ಮಂಡಿಸಿದರು.