ಉಡುಪಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವು ಡಿಸೆಂಬರ್ 14 ಮತ್ತು 15 ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಡಿ. 14 ರಂದು ಬೆಳಗ್ಗೆ 9 ಘಂಟೆಗೆ ಕ್ರೀಡಾಕೂಟ ಆರಂಭವಾಗಲಿದ್ದು, ನೌಕರರಿಗೆ ಅಥ್ಲೆಟಿಕ್ಸ್, ಗುಂಪು ಸ್ಪರ್ಧೆ, ಸಾಂಸ್ಕೃತಿಕ ಹಾಗೂ ಇತ್ಯಾದಿ ಕ್ರೀಡೆಗಳು ನಡೆಯಲಿದ್ದು, ಒಂದು ಸ್ಪರ್ಧೆಯಲ್ಲಿ ಐದಕ್ಕಿಂತ ಕಡಿಮೆ ಸ್ಪರ್ಧಾಳುಗಳಿದ್ದಲ್ಲಿ ಅಂತಹ ಸ್ಪರ್ಧೆಗೆ ರಾಜ್ಯ ಮಟ್ಟಕ್ಕೆ ನೇರವಾಗಿ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳ ಕಚೇರಿ ಅಥವಾ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.