ಸುಳ್ಯ: ಮಂಗಳೂರು ಮೂಲದ ವ್ಯಕ್ತಿಯೋರ್ವರು ಬೇರೆ ಒಂದು ಮಹಿಳೆಯೊಂದಿಗೆ ಸುಳ್ಯದ ಗಾಂಧಿನಗರ ಲಾಡ್ಜಿಗೆ ಬಂದು ತಂಗಿದ್ದರು ಎನ್ನುಲಾಗಿದ್ದು, ಈ ವಿಷಯ ಆತನ ಪತ್ನಿಗೆ ತಿಳಿದಿದ್ದು ಇಂದು ಸಂಜೆ ಸುಳ್ಯಕ್ಕೆ ಬಂದ ಆಕೆ ಅವರು ತಂಗಿದ್ದ ಲಾಡ್ಜ್ ಬಳಿ ಬಂದು ರಂಪಾಟ ಮಾಡಲು ಪ್ರಾರಂಭಿಸಿದರು.
ಪ್ರೇಯಸಿಯೊಂದಿಗೆ ಪತಿ ಬರುವುದನ್ನು ರಸ್ತೆಯಲ್ಲಿ ನಿಂತು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಬೀದಿರಂಪಾಟ ಆರಂಭಿಸಿದ್ದು, ಘಟನೆಯನ್ನು ನೋಡಲು ನೂರಾರು ಜನ ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನ ಪಟ್ಟರು ಆತನಿಗೆ ಸಾಧ್ಯವಾಗಲಿಲ್ಲ.
ಈ ವೇಳೆ ಲಾಡ್ಜ್ ನಲ್ಲಿದ್ದ ಆಕೆಯ ಗಂಡನಿಗೆ ತನ್ನ ಪತ್ನಿ ಬಂದಿರುವ ವಿಷಯ ತಿಳಿದು ತನ್ನೊಂದಿಗೆ ಪ್ರೇಯಸಿಯನ್ನು ಕರೆದು ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ.
ಪತಿಯನ್ನು ಪತಿಯೊಂದಿಗಿದ್ದ ಆಕೆಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿ ಮಹಿಳೆಯನ್ನು ಹಿಡಿದಿಟ್ಟು ತನ್ನ ಕೋಪವನ್ನು ಹೊರ ಹಾಕುತ್ತಿದ್ದರು. ಈ ಘಟನೆ ಪೊಲೀಸರಿಗೆ ತಿಳಿದು ಪೊಲೀಸರು ಬಂದು ಮೂವರನ್ನು ಠಾಣೆಗೆ ಕರೆದೋಯ್ದು ವಿಚಾರಣೆ ನಡೆಸಿ ಮಾತುಕತೆ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.