ಮುಂಬೈ: ಹತ್ತು ತಿಂಗಳ ಮಗುವನ್ನು ಕ್ಯಾಬ್‌ನಿಂದ ಹೊರಗೆಸೆದು ಸಾಯಿಸಿ, ಮಗುವಿನ ತಾಯಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಪಾಲ್ಘರ್ ಬಳಿ ಇರುವ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ನಡೆದಿದೆ.
ಮಹಿಳೆ ಮತ್ತು ಮಗು ಇತರ ಪ್ರಯಾಣಿಕರು ಹಂಚಿಕೊಂಡ ಕ್ಯಾಬ್‌ನಲ್ಲಿ ಪೆಲ್ಹಾರ್‌ನಿಂದ ಪೊಶೆರೆಗೆ ಹಿಂತಿರುಗುತ್ತಿದ್ದರು. ಈ ನಡುವೆ ಟ್ಯಾಕ್ಸಿ ಚಾಲಕ ಹಾಗೂ ಇತರೆ ಪ್ರಯಾಣಿಕರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆ ವಿರೋಧಿಸಿದಾಗ ಮಗುವನ್ನು ಕ್ಯಾಬ್‌ನಿಂದ ಹೊರಕ್ಕೆ ಎಸೆದಿದ್ದಾರೆ. ಇದರ ಪರಿಣಾಮ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕ್ಯಾಬ್‌ನಿಂದ ಹೊರಕ್ಕೆ ತಳ್ಳಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆರೋಪಿಗಳ ಸುಳಿವು ಮಾತ್ರ ಈವರೆಗೂ ಪತ್ತೆಯಾಗಿಲ್ಲ.