
ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ಅನುಪಮ್ ಅಗರ್ವಾಲ್ ರವರನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶೆಟ್ಟಿ ಜಪ್ಪು ನೇತ್ರತ್ವದಲ್ಲಿ ಇಂದು ಧಿನಾಂಕ 12/09/2023 ಮಂಗಳವಾರ ಬೆಳಗ್ಗೆ 11.30 ಕ್ಕೆ ತುಳುನಾಡ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಂದು ಬೆಳಗ್ಗೆ 11.30 ಕ್ಕೆ ಭೇಟಿ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿದರು ಬಳಿಕ ಮಂಗಳೂರು ನಗರದ ಹಲವಾರು ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ತುಳುನಾಡ ರಕ್ಷಣಾ ವೇದಿಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಇಬ್ರಾಹಿಂ ಜೆಪ್ಪು, ಪ್ರಶಾಂತ್ ಭಟ್ ಕಡಬ, ಜ್ಯೋತಿ ಜೈನ್, ಮುನೀರ್ ಮುಕ್ಕಚೇರಿ, ರಮೇಶ್ ಪೂಜಾರಿ ಶಿರೂರು, ಯಶು ಪಕ್ಕಳ ತಲಪಾಡಿ, ಗೋಲ್ಡನ್ ಫಾರೂಕ್, ಶಾರದಾ ಶೆಟ್ಟಿ ಗೈಟನ್ ಡಿಸೋಜಾ, ಮುನೀರ್ ಸುಲೈಮಾನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.