ಛೇ..! ಇದೆಂತಾ ದುರ್ದೈವ – ಒಂದೇ ಮನೆಯಲ್ಲಿ ಮಗ, ತಾಯಿ ಇಬ್ಬರಿಗೂ ಹೃದಯಾಘಾತ

ಬೆಂಗಳೂರು: ಮಗನಿಗೆ ಹೃದಯಾಘಾತವಾದ ವಿಚಾರ ತಿಳಿದು ತಾಯಿಗೂ ಹೃದಯಾಘಾತವಾಗಿರುವ ಮನ ಮಿಡಿಯುವ ಘಟನೆ ಬೆಂಗಳೂರಿನ ಕೆಂಗೇರಿ ಉಪ ನಗರದ ವರಗೇರನಹಳ್ಳಿಯಲ್ಲಿ ನಡೆದಿದೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್ (28) ಖಾಸಗಿ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ರಾತ್ರಿ ಆಸ್ಪತ್ರೆಯಲ್ಲಿಯೇ ಹೃದಯಾಘಾತದಿಂದ ನವೀನ್ ಕೊನೆಯುಸಿರೆಳೆದಿದ್ದಾರೆ. ಮಗನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ತಾಯಿಗೂ ಬೆಳಗಿನ ಜಾವ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ತಾಯಿ, ಮಗ ಇಬ್ಬರೂ ಒಂದು ದಿನ ಮೃತಪಟ್ಟಿದ್ದು, ನಿಜಕ್ಕೂ ಇದೊಂದು ವಿಪರ್ಯಾಸವೆಂದೇ ಹೇಳಬಹುದು. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವರಗೇರನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ

Check Also

ಮಂಗಳೂರು: ಮತಗಟ್ಟೆಗಳಲ್ಲಿ ವರ್ಣ ಚಿತ್ತಾರ

ಎಲ್ಲೆಡೆ ಚುನಾವಣೆ ಕಾವು ಹೆಚ್ಚಾಗುತ್ತಾ ಇದೆ. ಇತ್ತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳೂರು ತಾಲೂಕು …

Leave a Reply

Your email address will not be published. Required fields are marked *

You cannot copy content of this page.