ಮಡಿಕೇರಿ : ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರ ಜೊತೆ ಸೆಕ್ಸ್ ನಡೆಸಿ ವಿಕೃತಿ ಮೆರೆದ ಯುವಕನೊಬ್ಬನ ಕರಾಳ ಮುಖ ಬಯಲಾಗಿದೆ.
ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ಸೈಯ್ಯದ್ ಎಂಬಾತ ಈ ಹೇಯ ಕೃತ್ಯವನ್ನು ಎಸಗಿದ್ದಾನೆ.
ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರ ಜೊತೆ ಸೆಕ್ಸ್ ನಡೆಸಿ ವಿಕೃತಿ ಮೆರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ ಈತ ಶವಾಗಾರದಲ್ಲಿದ್ದ ಮಹಿಳೆಯರ ನಗ್ನ ಚಿತ್ರವನ್ನು ಸೆರೆಹಿಡಿದು ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದನು ಎಂಬ ಆತಂಕಕಾರಿ ವಿಚಾರ ಬಯಲಾಗಿದೆ ಎನ್ನಲಾಗಿದೆ. 2021 ರ ಏಪ್ರಿಲ್ ತಿಂಗಳಿನಲ್ಲಿ ಕೆಲಸಕ್ಕೆ ಸೇರಿದ ಸೈಯದ್ ಕೋವಿಡ್ ಟೈಮ್ ನಲ್ಲಿ ಉತ್ತಮ ಕೆಲಸ ಮಾಡಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರನಾಗಿದ್ದನು, ಆದರೆ ಈತನ ಅಸಲಿ ಮುಖ ಈಗ ಬಯಲಾಗಿದೆ.