ಸಾಗರ:ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕನೊಬ್ಬ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಇಂದು ಸಾಗರ ಪಟ್ಟಣ ಕಂಪ್ಲಿಟ್ ಬಂದ್ ಆಗಿದೆ.
ಸಾಗರ ಬಂದ್‌ಗೆ ವಿವಿಧ ಹಿಂದೂ ಸಂಘಟನೆಗಳಿಂದ ಕರೆ ನೀಡಿದ್ದಾರೆ.
ಅಂಗಡಿ-ಮುಂಗಟ್ಟು ಅನ್ನು ವಿವಿಧ ಹಿಂದೂ ಸಂಘಟನೆಗಳು ಬಂದ್ ಮಾಡಿಸಿದ್ದಾರೆ. ಸಾಗರ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸುನೀಲ್ ಮೇಲಿನ ಮಚ್ಚಿನ ದಾಳಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಸಾಗರ ಪೊಲೀಸರು ಆರೋಪಿ ಸಮೀರ್ ನನ್ನು ಬಂಧಿಸಿದ್ದಾರೆ. ಸೋಮವಾರ ಸಾಗರ ಪಟ್ಟಣ ಬಿ.ಎಚ್ ರಸ್ತೆಯಲ್ಲಿ ನೆಹರು ನಗರ ನಿವಾಸಿ ಸುನೀಲ್ ಎಂಬಾತ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಕಿಡಿಗೇಡಿಗಳ ಈ ಕೃತ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿ ಸಮೀರ್ ನನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತಂಡ ರಚಸಿಸಲಾಗಿತ್ತು. ತಡರಾತ್ರಿ ಶಿವಮೊಗ್ಗದಲ್ಲಿ ಆರೋಪಿ ಸಮೀರ್ ನನ್ನು ಬಂಧಿಸಲಾಗಿದೆ.