ಬೆಂಗಳೂರು : ಬೆಂಗಳೂರಿನಲ್ಲಿ ರಣಭೀಕರ ಹತ್ಯೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ತಲೆ ಮೇಲೆ 20 ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಹೆಣ್ಣಿನ ವಿಚಾರವಾಗಿ ಜಮಖಂಡಿ ಮೂಲದ ಮಂಜುನಾಥ್ ನನ್ನು ಮೂವರು ಮಹಿಳೆಯರು ಸೇರಿದಂತೆ 6 ಜನರ ತಂಡ ನಡು ರಸ್ತೆಯಲ್ಲೇ 20 ಕ್ಕೂ ಹೆಚ್ಚು ಬಾರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ನನ್ನು ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆ.ಪಿ. ಅಗ್ರಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.