December 8, 2024
WhatsApp Image 2022-12-06 at 9.42.22 AM

ಕ್ನೋ: ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ 15 ವರ್ಷಗಳ ಕಾಲ ಕಾದು ತನ್ನ ನೆರೆಯವನನ್ನು ಕೊಲ್ಲುವುದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದ್ದಾನೆ.

ಏನಿದು ಘಟನೆ?

ರಾಮ್ ಜೀವನ್ ಲೋಧಿ(ಕೊಲೆಯಾದವನು) ಎಂಬಾತ 2007 ರಲ್ಲಿ ಶಿವ ಯಾದವ್(ಕೊಲೆ ಆರೋಪಿ)ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ ನಂತರ ಸೇಡು ತೀರಿಸಿಕೊಳ್ಳಲು ಯೋಜಿಸಿದ್ದ.

ವರದಿಯ ಪ್ರಕಾರ, ಯಾದವ್ ಅವರ ಕುಟುಂಬದವರಾದ ಅವರ ಪತ್ನಿ ಮತ್ತು ತಾಯಿಯನ್ನು ಲೋಧಿ ಜಮೀನು ವಿವಾದದ ಕಾರಣದಿಂದ ಅವರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದ. ಆಗ 26 ವರ್ಷದವನಾಗಿದ್ದ ಯಾದವ್ ಅವಮಾನವನ್ನು ಅಸಹಾಯಕತೆಯಿಂದ ನೋಡುತ್ತಿದ್ದನು ಮತ್ತು ಲೋಧಿಗೆ ಪಾಠ ಕಲಿಸಲು ಅಂದೇ ನಿರ್ಧರಿಸಿದ್ದನು.

15 ವರ್ಷಗಳಿಂದ ಕೊಲೆ ಯೋಜನೆ

50 ವರ್ಷದ ಯಾದವ್ ತನ್ನ ಕುಟುಂಬದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ, ಈ ವರ್ಷದ ಆರಂಭದಲ್ಲಿ ನೇಪಾಳದಿಂದ 2 ದೇಶ ನಿರ್ಮಿತ ಪಿಸ್ತೂಲ್‌ಗಳನ್ನು ಖರೀದಿಸಿದ್ದಾನೆ. ಈ ಸೇಡು ತೀರಿಸಿಕೊಳ್ಳಲು ಯಾದವ್ ತನ್ನ ಮಗನಿಗೆ 15 ವರ್ಷ ತುಂಬುವವರೆಗೆ ಕಾಯುತ್ತಿದ್ದನು. ಯಾಕಂದ್ರೆ, ನನಗೇನಾದ್ರೂ ಆದ್ರೆ, ನನ್ನ ಕುಟುಂಬ ನೋಡಿಕಳ್ಳಲು ನನ್ನ ಮಗ ಆಸೆರೆಯಾಗಿರುತ್ತಾನೆ ಎಂಬ ಯೋಜನೆ ಅವನಲ್ಲಿತ್ತು.

ಯಾದವ್ ತನ್ನ ಗುರಿಯನ್ನು ಅಭ್ಯಾಸ ಮಾಡಲು ಪ್ರತ್ಯೇಕ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ. ಅಷಷ್ಟೇ ಅಲ್ದೇ, ಯಾದವ್ ಲೋಧಿಯ ದೈನಂದಿನ ದಿನಚರಿ ಮತ್ತು ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ. ತಿಂಗಳುಗಟ್ಟಲೆ ಆತನನ್ನು ಹಿಂಬಾಲಿಸಿದ ಯಾದವ್ ಒಂದು ದಿನ ಲೋಧಿಯನ್ನು ಮೂಲೆಗುಂಪು ಮಾಡಿ ಗುಂಡಿಕ್ಕಿ ಕೊಂದನು.

ಈ ಅಪರಾಧದಲ್ಲಿ ಯಾದವ್ ಕುಟುಂಬದ ಇತರ ಸದಸ್ಯರು ಭಾಗಿಯಾಗಿರುವ ಬಗ್ಗೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಸದ್ಯ ಯಾದವ್ ಬಂಧನದಲ್ಲಿದ್ದು, ತನಿಖೆ ನಡೆಯುತ್ತಿದೆ.‌

About The Author

Leave a Reply

Your email address will not be published. Required fields are marked *

You cannot copy content of this page.