ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳೊಂದರಲ್ಲಿ ಅಕ್ರಮ ಸಾಗಾಟದ 4 ಕೋಟಿ ರೂ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ.
ನವೆಂಬರ್ 1 – 30ರವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹತ್ತು ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ವೇಳೆ 24 ಕ್ಯಾರೆಟ್ ಶುದ್ಧತೆಯ 7,692.000 ಗ್ರಾಂ ಮೌಲ್ಯದ ಚಿನ್ನವನ್ನು ಸೀಝ್ ಮಾಡಲಾಗಿದೆ. ವಶಕ್ಕೆ ತೆಗೆದುಕೊಂಡ ಚಿನ್ನದ ಮೌಲ್ಯ 4,01,18,280 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ದುಬೈನಿಂದ ಆಗಮಿಸಿರುವ ಈ ಹತ್ತು ಪ್ರಯಾಣಿಕರು ಎಲ್ಇಡಿ ಬಲ್ಬ್, ಕೈಗಡಿಯಾರ, ಕೀಪ್ಯಾಡ್ ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳ, ರಟ್ಟಿನ ಪೆಟ್ಟಿಗೆ, ಲೇಯರ್ಡ್ ಬನಿಯನ್, ಗುದನಾಳದಲ್ಲಿ ಪೇಸ್ಟ್, ಪೌಡರ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಾಟ ಮಾಡಿದ್ದರು. ಈ ಎಲ್ಲಾ ಪ್ರಕರಣವನ್ನು ಭೇದಿಸಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.