ನಿಖಿಲ್ ಮತ್ತು ಶ್ರೇಯಾ ಸಾಗಿರುವ ಮಾರ್ಗದಲ್ಲಿನ ಇತರ ಸಿಸಿ ಟಿವಿ ದೃಶ್ಯಗಳನ್ನು ಅಂಗಡಿ ಮಾಲೀಕ ಪರಿಶೀಲನೆ ಮಾಡಿದ್ದಾರೆ. ಆಗ ಅವರು ವೈಟ್ಟಿಲದ ಮತ್ತೊಂದು ಪೆಟ್‌ ಶಾಪ್‌ನಿಂದ ನಾಯಿಗೆ ಕೊಡುವ ಆಹಾರವನ್ನೂ ಕದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಎರಡೂ ಪೆಟ್‌ ಶಾಪ್‌ನ ಮಾಲೀಕರು ಕಳ್ಳತನ ಆಗಿರುವ ಬಗ್ಗೆ ಪಣಂಗಾಡ್ ಪೊಲೀಸ್‌ ಠಾಣೆಯಲ್ಲಿ ನಿಖಿಲ್ ಮತ್ತು ಶ್ರೇಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪಣಂಗಾಡ್ ಠಾಣೆ ಪೊಲೀಸರು ನಿಖಿಲ್ ಮತ್ತು ಶ್ರೇಯಾ ಚಲಿಸುತ್ತಿದ್ದ ಬೈಕ್‌ ನಂಬರ್‌ನ, ಸಿಸಿ ಟಿವಿ ಪೂಟೇಜ್ ಪರಿಶೀಲನೆ ನಡೆಸಿದಾಗ ಇಬ್ಬರೂ ಕಳ್ಳರು ಉಡುಪಿ ಮೂಲದವರು ಎಂದು ತಿಳಿದು ಬಂದಿದ್ದು ಕೇರಳದ ಪೊಲೀಸರು ಉಡುಪಿಯ ಅವರ ನಿವಾಸದಲ್ಲಿ ಶ್ರೇಯಾ ಮತ್ತು ನಿಖಿಲ್‌ನನ್ನು ಬಂಧನ ಮಾಡಿದ್ದಾರೆ. ಜೊತೆಗೆ ಕದ್ದ ನಾಯಿ ಮರಿಯನ್ನು ಕೊಂಡು ಹೋಗಿ ಪೆಟ್ ಶಾಪ್ ಮಾಲೀಕನಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.