ಬೆಂಗಳೂರು: ಕಲರ್ಸ್ ಕನ್ನಡದ ಈ ಬಾರಿಯ ಬಿಗ್ ಬಾಸ್ 9 ರ ವಿಜೇತರಾಗಿ ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.
ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗಗೆ ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಒಟ್ನಲ್ಲಿ ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.