ಉಡುಪಿ : ರಿಕ್ಷಾ ಚಾಲಕನಿಗೆ ಐವರ ತಂಡದಿಂದ ಹಲ್ಲೆ ,ಬೆದರಿಕೆ..!

ಉಡುಪಿ : ರಿಕ್ಷಾ ಚಾಲಕರೊಬ್ಬರಿಗೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿರುವ ಘಟನೆ ರಾತ್ರಿ ವೇಳೆ ಕಲ್ಸಂಕ ಬಳಿ ಸಂಭವಿಸಿದೆ. ಪುತ್ತೂರು ಅಡ್ಕದಕಟ್ಟೆಯ ಮಂಜುನಾಥ(40) ಎಂಬವರು ತಮ್ಮ ರಿಕ್ಷಾ ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆ ಬದಿ ಎರಡು ಬೈಕ್ ಗಳಲ್ಲಿ ಬಂದ 5 ಮಂದಿ ಯುವಕರು ಬಾಟಲಿಯನ್ನು ರಸ್ತೆಯ ಮೇಲೆ ಹಾಕಿದ್ದರು. ಇದನ್ನು ಪ್ರಶ್ನಿಸಿದಕ್ಕಾಗಿ ಚಾಲಕ ಮಂಜುನಾಥ್ ಅವರಿಗೆ ಐವರ ತಂಡ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ನಡೆಸಿ ಆರೋಪಿಗಳು ತಮ್ಮ ಎರಡು ಬೈಕಿನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಸುಳ್ಯ: ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಢಿಕ್ಕಿ- ಕಾರು ಜಖಂ

ಸುಳ್ಯ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಡಿರುವ ಘಟನೆ ಸುಳ್ಯ ಗಾಂಧಿನಗರ …

Leave a Reply

Your email address will not be published. Required fields are marked *

You cannot copy content of this page.