ಪುತ್ತೂರು: ಶಾಲೆಯ ಜಗಲಿಯಲ್ಲಿಯೇ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ಮುಕ್ವೆಯಲ್ಲಿ ನಡೆದಿದೆ. ಮುಕ್ವೆ ಬಳಿ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಇದೇ ವೇಳೆ ಶಾಲೆಯ ಹಿಂಬದಿ ತೆರಳಿದಾಗ ವ್ಯಕ್ತಿಯೋರ್ವ ಶಾಲಾ ವಠಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.