ಕಾರ್ಕಳ : ಸರಕಾರಿ ಆಸ್ಪತ್ರೆಯಲ್ಲಿ 1,30 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ ಕಳವು

ಕಾರ್ಕಳ : ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರ ಚಿನ್ನದ ಕರಿಮಣಿ ಸರ ಕಳುವಾಗಿರುವ ಘಟನೆ ನಡೆದಿದೆ.

ಶಿರ್ಲಾಲಿನ ಸಂಕೇತ್ ಎಂಬವರ ಪತ್ನಿ ಉಷಾ ಹೆರಿಗೆಗೆಂದು ಜ.15 ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 16ರಂದು ಹೆರಿಗೆಯಾದ ಬಳಿಕ ಹೆರಿಗೆ ವಾರ್ಡ್ನಲ್ಲಿ ದಾಖಲಾಗಿದ್ದು ಜ.17ರಂದು ಮಧ್ಯಾಹ್ನದ ವೇಳೆ ಸ್ನಾನಕ್ಕೆಂದು ಹೋದವರು ಅಲ್ಲಿಯೇ ತನ್ನ ಚಿನ್ನದ ಕರಿಮಣಿ ಸರವನ್ನು ಇರಿಸಿದ್ದರು.

ಆದರೆ ಸ್ನಾನ ಮಾಡುವ ಸಂದರ್ಭದಲ್ಲಿ ತಲೆ ಸುತ್ತು ಬಂದು ಬಿದ್ದ ಅವರನ್ನು ಅವರ ತಾಯಿ ಕರೆತಂದು ಮಲಗಿಸಿದ್ದರು. ಸುಮಾರು ಒಂದು ಗಂಟೆಯ ಬಳಿಕ ಉಷಾ ಅವರ ಕರಿಮಣಿ ಸರ ಇಲ್ಲದಿರುವ ವಿಚಾರ ತಿಳಿದ ಅವರ ತಾಯಿ ಕರಿಮಣಿ ತೆಗೆದಿಟ್ಟಿರುವ ಸ್ಥಳದಲ್ಲಿ ಹುಡುಕಿದಾಗ ಸರ ಕಳುವಾಗಿರುವುದು ಬೆಳಕಿಗೆ ಬಂದಿದೆ. 32 ಗ್ರಾಂ ತೂಕದ 1,30,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳುವಾಗಿದ್ದು ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ- ನೆಲ್ಯಾಡಿ ಬಳಿ ಅಪಹರಣಕಾರರ ಬಂಧನ

ಹಾಸನ: ಹಾಸನದ ಬಿಟ್ಟಗೌಡನಹಳ್ಳಿ ಬಳಿ ನಡೆದಿದ್ದ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಪಹರಣಕಾರರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ …

Leave a Reply

Your email address will not be published. Required fields are marked *

You cannot copy content of this page.