ಉಡುಪಿ: ನಗರದ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳನ್ನು ಕಳವುಗೈದ ಘಟನೆ ಸಂಭವಿಸಿದೆ.
76 ಬಡಗಬೆಟ್ಟುವಿನ ಮನೆಯೊಂದರಲ್ಲಿ ರಾತ್ರಿ ಈ ಘಟನೆ ನಡೆದಿದೆ. ಮರುದಿನ ಬೆಳಗ್ಗೆ ವಿಚಾರ ತಿಳಿದಿದೆ. ಕಳ್ಳರು ಅಡುಗೆ ಕೋಣೆಯ ಮಧ್ಯದ ಕಿಟಕಿಯನ್ನು ಮುರಿದು ಟೀಪಾಯ್ ಮೇಲೆ ಇಟ್ಟಿದ್ದ ಸುಮಾರು 8 ಲಕ್ಷ ರೂ.ಮೌಲ್ಯದ ವಜ್ರದ ನೆಕ್ಲೆಸ್, ಸುಮಾರು 8 ಲಕ್ಷ ರೂ.ಮೌಲ್ಯದ 2 ವಜ್ರದ ಬಳೆಗಳು, ಸುಮಾರು 2 ಲಕ್ಷ ರೂ.ಮೌಲ್ಯದ 2 ಜತೆ ವಜ್ರದ ಬೆಂಡೋಲೆಗಳು, 80 ಸಾವಿರ ರೂ.ನಗದನ್ನು ಕಳವುಗೈದಿದ್ದಾರೆ.
ಕಳವು ಮಾಡಿದ ಸೊತ್ತುಗಳ ಅಂದಾಜು ಮೌಲ್ಯ 18,80,000 ರೂ.ಆಗಿದೆ. ಮನೆಯ ಮಾಲಕಿ ಸುತಲಾ ಬಿ. ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.