ವಿಟ್ಲ: ಕನ್ಯಾನ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಲರಾಯಿ ದೈವಸ್ಥಾನದ ಮಹಾದ್ವಾರ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು.
ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಶ್ರೀ ಮಲರಾಯಿ ದೈವಸ್ಥಾನದ ಮಹಾದ್ವಾರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಮುಖ್ಯಸ್ಥರಾದ ಜಗನ್ನಾಥ ಶೆಟ್ಟಿ, ಕ್ಷೇತ್ರದ ಪ್ರಮುಖ ಅರ್ಚಕರಾದ ಗಣೇಶ್ ಭಟ್, ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಕನ್ಯಾನ, ಗಂಗಾಧರ್ ಕನ್ಯಾನ, ಅಶ್ವಿನಿ ಕುಮಾರ್, ಗುತ್ತಿಗೆದಾರ ಕೌಶಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಜಯಾನಂದ ಪೂಜಾರಿ, ಕ್ಷೇತ್ರದ ಪ್ರಮುಖರಾದ ಕೃಷ್ಣಪ್ಪ ಸಪಲ್ಯ, ರಾಜಾರಾಂ ಗಿರಿಯಪ್ಪ ಗೌಡ, ರವಿಚಂದ್ರ ಗೌಡ, ನಾಗರಾಜ್ ಆಚಾರಿ, ಲೋಕೇಶ್ ಭಂಡಾರಿ ಪರಕ್ಕಜೆ, ಶಿವಪ್ಪ ಗೌಡ, ನಿವೃತ್ತ ಅಧ್ಯಾಪಕರು ದಯಾನಂದ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.