ಮಂಗಳೂರು: ಬೈಕಂಪಾಡಿಯ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ..!

ಮಂಗಳೂರು: ನಗರದ ಬೈಕಂಪಾಡಿ ಬಳಿಯ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ‌ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಸುಮರು 1 ಘಂಟೆ ಸುಮಾರಿಗೆ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿದ್ದು ಇದನ್ನು ಗಮನಿಸಿದ ಸಾರ್ವನಿಕರು ಹಾಗು ಸಂಸ್ಥೆಯ ಸೆಕ್ಯೂರಿಟಿ ಅಗ್ನಿಶಾಮಕ ದಳ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಪಾಂಡೇಶ್ವರ, ಕದ್ರಿ, ಎಮ್ ಆರ್ ಪಿ ಎಲ್ ನ ಅಗ್ನಿಶಾಮಕ ಸಿಬ್ಬಂದಿಗಳು ಬರಬೇಕಾಯಿತು. ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿದ್ದರಿಂದ ಸುಮಾರು ಎರಡು ಮೂರು ಘಂಟೆ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು, ಇವರುಗಳ ಜೊತೆ ಸಾರ್ವಜನಿಕರು ಸಹಕರಿಸಿದ್ದಾರೆ.

Check Also

ಉಡುಪಿ: ಪರ್ಕಳದ ಕೆರೆದಂಡೆ ನಾಲ್ಕನೇ ಬಾರಿ ಕುಸಿತ, ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಪರ್ಕಳ: ಇಲ್ಲಿನ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣವಾಗುತ್ತಿರುವ ಕೆರೆ ಈ ಬಾರಿಯೂ ಸಾಧಾರಣ ಮಳೆಗೇ ಕುಸಿದಿದೆ. ಸ್ಥಳಕ್ಕೆ ಉಡುಪಿ …

Leave a Reply

Your email address will not be published. Required fields are marked *

You cannot copy content of this page.