

ವಿಟ್ಲ: ಮನೆಮನೆಗೆ ತೆರಳಿ ಮತದಾನ ಸಮೀಕ್ಷೆ ನಡೆಸುತ್ತಿದ್ದ ತಂಡವನ್ನು ಸಂಶಯಗೊಂಡ ಸ್ಥಳೀಯರು ಅವರನ್ನು ವಿಟ್ಲ ಪೊಲೀಸರ ವಶಕ್ಕೆ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಸಾಲೆತ್ತೂರು ಭಾಗಕ್ಕೆ ಆಗಮಿಸಿದ ತಂಡದಲ್ಲಿ ಸುಮಾರು 11 ಜನರಿದ್ದು, ಅದರಲ್ಲಿ 6 ಮಂದಿ ಯುವತಿಯರ ತಂಡ ಮನೆಮನೆಗೆ ತೆರಳಿ, ಜನರ ಬಳಿ ನಿಮ್ಮ ಕ್ಷೇತ್ರ ಯಾವುದು? ಯಾವ ಪಕ್ಷಕ್ಕೆ ಮತದಾನ ಮಾಡುತ್ತೀರಿ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಈ ಬಗ್ಗೆ ಸಂಶಯಗೊಂಡ ಸ್ಥಳೀಯರು ಅವರನ್ನು ವಿಚಾರಿಸಿದಾಗ ನಾವು ಧ್ರುವ ಕಂಪೆನಿ ವತಿಯಿಂದ ಬಂದಿದ್ದು, ಮತದಾನ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರೆ ಹೊರತು ಸಮರ್ಪಕ ದಾಖಲೆ ನೀಡಿರುವುದಿಲ್ಲ. ಬಳಿಕ ಅವರನ್ನು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.