ಒಣ ಮೀನು ತಯಾರಿಸಲು ಯಂತ್ರ ಬಳಸಿ…

ಮಂಗಳೂರು: ಒಣ ಮೀನು ಪ್ರಿಯರಿಗೆ ಒಣ ಮೀನು ಸಿಕ್ಕಾರೆ ಆಯ್ತು, ಒಂದು ಚಂದದ ಮಸಾಲೆ ರೆಡಿ ಮಾಡಿ ಒಣ ಮೀನು ಸಾರು ಮಾಡುತ್ತಾರೆ. ಆದರೆ ಒಣ ಮೀನು ರೆಡಿ ಮಾಡೋ ಪ್ರಕ್ರಿಯೆಯನ್ನ ನೀವು ನೋಡಿದ್ರೆ ಮೀನು ತಿನ್ನೋ ಆಸೆಯನ್ನೇ ಬಿಟ್ಟುಬಿಡ್ತೀರ! ಹೌದು, ಒಣ ಮೀನು ಖರೀದಿ ಮಾಡುವವರು ಅದನ್ನು ಯಾವ ರೀತಿ ಸಂಸ್ಕರಣೆ ಮಾಡಿರುತ್ತಾರೆ ಎಂದು ಯೋಚಿಸಿರುವುದಿಲ್ಲ.

ಮಂಗಳೂರಿನ ಬಹುತೇಕ ಮೀನುಗಾರ ಕುಟುಂಬಗಳೂ ಒಣ ಮೀನು ಉದ್ಯಮವನ್ನು ಮಾಡುತ್ತವೆ. ಹಸಿ ಮೀನನ್ನು ಉಪ್ಪಿನಲ್ಲಿ ಶೇಖರಿಸಿ ಕೊಳೆಸಿ ಒಣ ಮೀನು ತಯಾರಿಸಲಾಗುತ್ತದೆ. ಬಯಲು ಪ್ರದೇಶಗಳಲ್ಲಿ ಈ ಒಣ ಮೀನನ್ನು ವಿಶಾಲವಾಗಿ ಒಣಗಿಸಲು ಹರಡಲಾಗುತ್ತದೆ. ಆ ಸಂದರ್ಭದಲ್ಲಿ ಈ ಮೀನುಗಳಿಗೆ ಯಾವುದೇ ಸುರಕ್ಷತೆ ಇಲ್ಲ. ತಿನ್ನುವ ಒಣ ಮೀನಿನ ಮೇಲೆ ನಾಯಿ, ಕಾಗೆಗಳು ಓಡಾಡುತ್ತವೆ.

ಈ ಕಾರಣದಿಂದ ಒಣಗಿದ ಮೀನು ಶುಚಿತ್ವ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದೆ. ಮೀನುಗಾರರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ಆಹಾರ ಇಲಾಖೆಯೂ ಸೂಚನೆ ನೀಡಿದೆ. ಮೀನುಗಾರರು ಹಳೆಯ ಪದ್ಧತಿಯನ್ನು ಮುಂದುವರಿಸಿದ್ದಾರೆ. ಆದರೆ ಈ ಮೀನು ಒಣಗಿಸಲು ಹಳೆಯ ಪದ್ಧತಿಯನ್ನು ಮುಂದುವರಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ತಂಡ ತಪಾಸಣೆ ಮಾಡಲಿದೆ. ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ.ಪ್ರವೀಣ್ ಖಚಿತಪಡಿಸಿದ್ದಾರೆ.

ಮೀನುಗಾರರಿಗೆ ಒಣ ಮೀನು ತಯಾರಿಸಲು ಈಗಾಗಲೇ ಸರ್ಕಾರದ ಸಬ್ಸಿಡಿಯೊಂದಿಗೆ ಯಂತ್ರಗಳ ಸವಲತ್ತನ್ನು ನೀಡಲಾಗಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಮೀನುಗಾರರು ಯಂತ್ರ ಖರೀದಿಗೆ ಮುಂದಾಗುತ್ತಿಲ್ಲ.

Check Also

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ …

Leave a Reply

Your email address will not be published. Required fields are marked *

You cannot copy content of this page.