ಪುತ್ತೂರು: ಪ್ರೀತ್ಸೇ ಅಂತ ಕಿರುಕುಳ ನೀಡುತ್ತಿದ್ದ ಕಾಮುಕ ನಿತೇಶ್ ರೈ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

ಪುತ್ತೂರು : ಚಿಗುರು ಮೀಸೆ ಹುಟ್ಟೋ ಹೊತ್ತಿನಲ್ಲಿ ತನ್ನ ಕಾಮ ತೀರಿಸಿಕೊಳ್ಳಲು ಅಮಾಯಕ ಹೆಣ್ಣು ಮಕ್ಕಳನ್ನ ಬಳಸಿಕೊಳ್ಳುತ್ತಿದ್ದ ಕಾಮುಕ ಯುವಕ ನಿತೇಶ್ ರೈ ವಿರುದ್ಧ ಇದೀಗ ಸಂಪ್ಯ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.

ಪುತ್ತೂರಿನಲ್ಲಿ ಖಾಸಗಿ ಕೆಲಸ ಮಾಡುತ್ತಿರುವ ನಿತೇಶ್ ರೈ ಕಾಮದ ವಿಚಾರ ಎರಡು ಮೂರು ತಿಂಗಳ ಹಿಂದೆ ಬಯಲಾಗಿದ್ದು , ಈತ ನೀಡಿದ ಕಿರುಕುಳದ ಬಗ್ಗೆ ಹಲವು ಹೆಣ್ಣು ಮಕ್ಕಳು ಆರೋಪವನ್ನು ಮಾಡಿದ್ದರು.

ಈತ ತನ್ನ ಕೆಲಸದ ಸಂದರ್ಭಗಳಲ್ಲಿ ಹಲವು ಊರುಗಳಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿನ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರೊಂದಿಗೆ ಸಲುಗೆ ಬೆಳೆಸಿಕೊಂಡು ಬಳಿಕ ಪ್ರೀತಿಸುತ್ತೇನೆ ಎಂದು ನಾಟಕವಾಡಿ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಸಿಕ್ಕ ಸಿಕ್ಕಲ್ಲಿ ಅಮಾಯಕ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರನ್ನ ತನ್ನ ಕಾಮತ್ರಿಶೆ ತಿರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ.

ಅಪ್ರಾಪ್ತ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ಅಕೆಯ ಬಳಿ ಪ್ರೀತಿಸುತ್ತಿದ್ದೇನೆ ಎಂದು ನಾಟಕವಾಡಿ ದೌರ್ಜನ್ಯ ಎಸಗಿ, ನಂತರ ನಿರಂತರವಾಗಿ ಅಕೆಯ ಫೋಟೋಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೆ ಈತನ ಸ್ನೇಹಿತರಿಗೂ ಆಕೆಯ ನಂಬರ್ ನೀಡಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ. ಇದನ್ನು ತಿಳಿದ ಹುಡುಗಿಯ ಪೋಷಕರು ಹಾಗೂ ಸ್ಥಳೀಯರು ಸೇರಿ ಈತನನ್ನ ಹೆಡೆಮುರಿಕಟ್ಟಿ ಧರ್ಮದೇಟು ನೀಡಿದ್ದರು.

ಇದೀಗ ನಿತೇಶ್ ರೈ ವಿರುದ್ಧ ಸಂಪ್ಯ ಠಾಣೆಯಲ್ಲಿ ಇಬ್ಬರು ಯುವತಿಯರು ದೂರನ್ನ ನೀಡಿದ್ದು, ಫೋಕ್ಸೋ, ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಅಮಾಯಕ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ತನ್ನ ಹಿತಕ್ಕೆ ಬೇಕಾದಂತೆ ಬಳಸಿಕೊಂಡ ಕಾಮುಕನ ವಿರುದ್ಧ ಕೇಸ್ ದಾಖಲಿಸಿಕೊಂಡು ಆರೋಪಿಗಾಗಿ ಸಂಪ್ಯ ಪೋಲೀಸರು ಬಲೆ ಬೀಸಿದ್ದಾರೆ.

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.