ಬಂಟ್ವಾಳ; ನಾಳೆ( ಫೆ.3) ಶ್ರೀ ಕ್ಷೇತ್ರ ನಂದಾವರ ದೇವರ ಮೂರು ಭಕ್ತಿ ಗೀತೆ ಬಿಡುಗಡೆ

ಬಂಟ್ವಾಳ: ಶ್ರೀ ಕ್ಷೇತ್ರ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಜನವರಿ 29 ರಿಂದ ಪ್ರಾರಂಭ ಗೊಂಡಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ.
ಈ ಪ್ರಯುಕ್ತ ನಾಳೆ (ಫೆ.3)ರಂದು ಸಂಜೆ 7 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಂದಾವರ ದೇವರುಗಳ ಮೂರು ಭಕ್ತಿ ಗೀತೆಗಳು ಬಿಡುಗಡೆಗೊಳ್ಳಲಿದೆ.
ಗಾಯಕ ರಾದ ಎಂ ಧನಂಜಯ ವರ್ಮ ಮತ್ತು ಪಲ್ಲವಿ ಪ್ರಭು ಕಂಠದಲ್ಲಿ ಈ ಭಕ್ತಿ ಗೀತೆ ಅದ್ಭುತವಾಗಿ ಮೂಡಿ ಬಂದಿದ್ದು ಇದಕ್ಕೆ ಶಿವಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಸಂದೇಶ್ ಬಾಬಣ್ಣ,ಧನಂಜಯ ವರ್ಮ,ಶಿವಪ್ರಸಾದ್ ಸಂಗೀತ ನಿರ್ದೇಶಕರಾಗಿದ್ದಾರೆ.
ಎಸ್.ಆರ್ ಕ್ರಿಯೇಷನ್ಸ್ ನ ಸೂರ್ಯ ಎನ್ ಕುಲಾಲ್ ಇವರು ಇದರ ಸಂಕಲನವನ್ನು ಮಾಡಿರುತ್ತಾರೆ.

Check Also

ಗಣಪತಿ ಮೆರವಣಿಗೆಯಲ್ಲಿ ಘರ್ಷಣೆ, ಅಂಗಡಿಗಳಿಗೆ ಬೆಂಕಿ ಹಚ್ಚಿದ ಅನ್ಯಕೋಮಿನ ಯುವಕರು- 144 ಸೆಕ್ಷನ್‌ ಜಾರಿ..!

ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೂರ್ತಿ ವಿಸರ್ಜನ ಮೆರವಣಿಗೆ ವೇಳೆ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಘಟನೆಯ ನಂತರ ಕೆಲವು …

Leave a Reply

Your email address will not be published. Required fields are marked *

You cannot copy content of this page.