ಮಂಗಳೂರು: ಆಟವಾಡುತ್ತಿದ್ದ ಮಕ್ಕಳಿಗೆ ಕಾರೊಂದು ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಹೊಡೆದ ಘಟನೆ ಮಂಗಳೂರು ನಗರ ಹೊರವಲಯದ ಬೆಂಗರೆಯ ಮೈದಾನದಲ್ಲಿ ನಡೆದಿದೆ.
ಇದರಿಂದ 7 ಮಕ್ಕಳಿಗೆ ಗಾಯವಾಗಿದೆ. ಗಾಯಗೊಂಡ ಮಕ್ಕಳನ್ನು ನಾಶಿಕ್, ಶಬೀಬ್, ಶಮ್ಮಾಝ್, ಮುಶೈಫ್, ಅರಾಫತ್, ಶಾಬಿಕ್, ನಹೀಂ ಎಂದು ಗುರುತಿಸಲಾಗಿದೆ. ಇವ್ರೆಲ್ಲಾ ಸುಮಾರು 6ರಿಂದ 15 ವರ್ಷ ಪ್ರಾಯದೊಳಗಿನವರಾಗಿದ್ದಾರೆ.
ಮಕ್ಕಳ ಕೈ, ಕಣ್ಣು ಕಾಲುಗಳಿಗೆ ಗಾಯಗಳಾಗಿವೆ. ಬೆಂಗರೆಯ ಸೂಪರ್ ಸ್ಟಾರ್ ಆಟದ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿದ ಕಾರು ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಈ ಕಾರು ವಿದ್ಯುತ್ ಕಂಬಕ್ಕೂ ಬಡಿದಿದೆ.
ತಕ್ಷಣ ಸ್ಥಳೀಯರು ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಐವರು ಮಕ್ಕಳನ್ನು ಒಳ ರೋಗಿಗಳಾಗಿ ದಾಖಲಿಸಲಾಗಿದೆ.