December 8, 2024
WhatsApp Image 2022-12-30 at 8.40.04 AM

ಹಮದಾಬಾದ್: ಇಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ನ ಗಾಂಧಿನಗರದಲ್ಲಿರುವಂತ ರುದ್ರ ಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.

 

ಈ ಕುರಿತು ಕುಟುಂಬದ ಮೂಲಗಳಿಂದ ಮಾಹಿತಿ ನೀಡಲಾಗಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿರುವಂತ ಗಾಂಧಿನಗರದಲ್ಲಿನ ಸೆಕ್ಟರ್ 30ರ ಸ್ಮಶಾನದಲ್ಲಿ ತಮ್ಮ ತಾಯಿ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುವುದಾಗಿ ಹೇಳಿದೆ.

ಅಂದಹಾಗೇ ಪುತ್ರ ಪಂಕಜ್ ಮೋದಿಯವರ ಮನೆಯ ಬಳಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಈ ಬಳಿಕ ಅಲ್ಲಿಂದ ಅಂತಿಮ ಯಾತ್ರೆ ಮೂಲಕ ಸೆಕ್ಟರ್ 30ರ ಸ್ಮಶಾನಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ.

About The Author

Leave a Reply

Your email address will not be published. Required fields are marked *

You cannot copy content of this page.