ದೇಶ

3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಕಾರ್ಪರೇಟರ್‌ಗಳು ಅನರ್ಹ

ಅಹಮದಾಬಾದ್: ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅನರ್ಹಗೊಂಡ ಬಿಜೆಪಿ ಸದಸ್ಯರು.2005-06 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ ಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೆ ಇವರು ಅನರ್ಹರಾಗಲಿದ್ದಾರೆ ಎಂಬ …

Read More »

ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ , ಹೆಣ್ಣೋ ತಿಳಿಯಲು ಹೊಟ್ಟೆ ಕತ್ತರಿಸಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಕುಡುಗೋಲಿನಿಂದ ಹೊಟ್ಟೆಯನ್ನು ಕತ್ತರಿಸಿದ್ದ ಉತ್ತರ ಪ್ರದೇಶದ ಬದೌನ್‍ನ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬದೌನ್‍ನ ಸಿವಿಲ್ ಲೈನ್ಸ್‍ನ ನಿವಾಸಿ ಪನ್ನಾ ಲಾಲ್ ಹಾಗೂ ಅನಿತಾ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅಲ್ಲದೇ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಸಹ ಹಾಕಿದ್ದ. ಇದೇ ವಿಚಾರಕ್ಕೆ ಸೆಪ್ಟೆಂಬರ್ 2020 ರಲ್ಲಿ ಪತ್ನಿ ಅನಿತಾ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ: ಪ್ರಧಾನಿ ಮೋದಿ

ಶಿಮ್ಲಾ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಜಡಿಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೌರ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕಾಂಗ್ರೆಸ್ ಮಾಡಿರುವ ಷಡ್ಯಂತ್ರವನ್ನು ಆ ಪಕ್ಷದವರೇ ಬಹಿರಂಗಪಡಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬೀಗ ಜಡಿದು, ಬಾಲರಾಮ ಟೆಂಟ್ನಲ್ಲಿ ಕೂರುವುದು ಅನಿವಾರ್ಯವಾಗುವಂತೆ ಮಾಡಲಿದ್ದಾರೆ. ಹೀಗಾಗಿ ಪ್ರತಿ ಮತಗಟ್ಟೆಯಿಂದ ಇವರನ್ನು ಗುಡಿಸಿಹಾಕಬೇಕಿದೆ.ನನ್ನ ಸ್ವಚ್ಛ ಭಾರತ ಅಭಿಯಾನ ನೆನಪಿದೆಯಲ್ಲ, ಜೂನ್ 1ರಂದು ಅದಕ್ಕಾಗಿ …

Read More »

10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ಜೂ.14 ರ ಬಳಿಕ ರದ್ದಾಗುತ್ತಾ.?ಇಲ್ಲಿದೆ ವಿವರ…

10 ವರ್ಷದ ಹಿಂದಿನ ಆಧಾರ್ ಕಾರ್ಡ್ ಜೂ.14 ರ ಬಳಿಕ ರದ್ದಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಜೂ. 14 ರವರೆಗೆ ಗಡುವು ನೀಡಲಾಗಿದೆ. ಜೂನ್ 14 ರೊಳಗೆ ಅಪ್ ಡೇಟ್ ಮಾಡಿಸದೇ ಇದ್ರೆ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿದ UIDAI ಜೂನ್ 14 ರೊಳಗೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಬೇಕು. ಆದರೆ ಅದರ ನಂತರ ಹಳೆಯ ಆಧಾರ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು …

Read More »

ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ NIA ಕಚೇರಿಗೆ ಬೆದರಿಕೆ ಕರೆ: ಸೈಬರ್​ ಪೊಲೀಸರಿಂದ ತನಿಖೆ ಶುರು

ಚೆನ್ನೈ (ತಮಿಳುನಾಡು): ಚೆನ್ನೈನ ಪುರಸೈವಾಕಂನಲ್ಲಿರುವ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್‌ಐಎ) ಕಚೇರಿಯ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಹಿಂದಿಯಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.   ಕರೆ ಸ್ವೀಕರಿಸಿದ ನಂತರ, ರಾಷ್ಟ್ರೀಯ ಗುಪ್ತಚರ ಏಜೆನ್ಸಿಯ ಅಧಿಕಾರಿಗಳು ತ್ವರಿತವಾಗಿ ಚೆನ್ನೈ ಪೊಲೀಸರ ಅಧಿಕಾರಿಗಳಿಗೆ ಸೂಚನೆ ನೀಡಿದರು, ಬೆದರಿಕೆ ಹಾಕಿದ್ದ ಪೋನ್ ನಂಬರ್‌ ಅನ್ನು ನೀಡಿದ್ದಾರೆ ಈ ಬಗ್ಗೆ ಚೆನ್ನೈನ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read More »

ಕೋವಿಶೀಲ್ಡ್ ಆಯ್ತು.. ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ …

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ ಎನ್ನಲಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ತಿಳಿದುಬಂದಿದೆ. ಕೋವ್ಯಾಕ್ಸಿನ್ ಪಡೆದವರಲ್ಲಿ ಅಧ್ಯಯನಕ್ಕೊಳಪಡಿಸಿದ್ದ 926 ಮಂದಿಯ ಪೈಕಿ ಶೇ.50 …

Read More »

ಕೋಟ: 3 ವರ್ಷದ ಮಗುವನ್ನು ಕಾರಿನಲ್ಲೆ ಮರೆತು ಮದುವೆಗೆ ಹೋದ ದಂಪತಿ – ಉಸಿರುಗಟ್ಟಿ ಸಾವನಪ್ಪಿದ ಬಾಲಕಿ3 ವರ್ಷದ ಮಗುವನ್ನು ಕಾರಿನಲ್ಲೆ ಮರೆತು ಮದುವೆಗೆ ಹೋದ ದಂಪತಿ – ಉಸಿರುಗಟ್ಟಿ ಸಾವನಪ್ಪಿದ ಬಾಲಕಿ

ಕೋಟ: ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನಲ್ಲಿ ಉಸಿರುಗಟ್ಟಿ ಸಾವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ …

Read More »

ಕೇರಳದಲ್ಲಿ ‘ಮೆದುಳು ತಿನ್ನುವ ಅಮೀಬಾ’ದಿಂದ ಉಂಟಾಗುವ ಅಪರೂಪದ ಸೋಂಕಿನ ‘PAM’ ಪ್ರಕರಣ ವರದಿ

ನವದೆಹಲಿ: ಕೇರಳದ ಐದು ವರ್ಷದ ಬಾಲಕಿಗೆ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಎಂದು ಕರೆಯಲ್ಪಡುವ ಅಪರೂಪದ ಮೆದುಳಿನ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಬಾಲಕಿಯನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಐಎಎನ್ಎಸ್ ತನ್ನ ವರದಿಯಲ್ಲಿ ತಿಳಿಸಿದೆ. ಮಗುವಿಗೆ ಆರಂಭದಲ್ಲಿ ಮಲಾಪುರಂನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಗ್ಯೂ, ಅವರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ಚಿಕಿತ್ಸೆಗಾಗಿ ಕೋಜಿಕೋಡ್ಗೆ ಸ್ಥಳಾಂತರಿಸಲಾಯಿತು. ಕೇರಳದಲ್ಲಿ ಪಿಎಎಂ ಪ್ರಕರಣ ಪತ್ತೆ: ಸೋಂಕು ಹೇಗೆ ಉಂಟಾಗುತ್ತದೆ? ಪಿಎಎಂಗೆ …

Read More »

ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ

ಜಾಮ್ನರ್ : ರಜೆ ಕಳೆಯಲು ಮನೆಗೆ ಬಂದಿದ್ದ ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಜಾಮ್ನರ್ ನಲ್ಲಿ ಈ ಘಟನೆ ನಡೆದಿದೆ. ಜಾಮ್ನರ್ ಗಣಪತಿ ನಗರ ನಿವಾಸಿ ಪ್ರಕಾಶ್ ಗೋವಿಂದ ಕಪ್ಡೆ (37). ಅವರು ಈ ಹಿಂದೆ ಕೇಂದ್ರ ಸಚಿವ ನಾರಾಯಣ್ ರಾಣೆ, ಸಚಿವ ಛಗನ್ ಭುಜ್ಬಲ್ ಮತ್ತು ಕ್ರಿಕೆಟಿಗ ಸಚಿನ್ ತೆಡುಲ್ಕರ್ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದ್ದರು. ಮೃತರು ತಾಯಿ, ತಂದೆ, ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. …

Read More »

ಕೇವಲ 5 ರೂಪಾಯಿಯ ಕುರ್ಕುರೆ ತಂದುಕೊಡಲಿಲ್ಲ ಎಂದು ಗಂಡನಿಗೆ ಡಿವೋರ್ಸ್…!

ಆಗ್ರಾ: ಒಂದು ಸಣ್ಣ ಕಾರಣದಿಂದಾಗಿ ಪತ್ನಿಯೊಬ್ಬಳು ಪತಿಯ ಜೊತೆ ಇರಲು ಸಾಧ್ಯವಿಲ್ಲವೆಂದು ವಿಚ್ಚೇದನ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಒಂದು ವರ್ಷದ ಹಿಂದೆ ಮದುವೆಯಾದ ದಂಪತಿ ಜೀವನದಲ್ಲಿ ಮನಸ್ತಾಪ ಆಗುವಂಥ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಪತ್ನಿಗೆ ಹುರಿದ ತಿನಿಸು ಅಂದ್ರೆ ಪ್ರಾಣ.ಅದರಲ್ಲೂ ಕುರ್ಕುರೆ ಆಕೆಗೆ ಅಚ್ಚುಮೆಚ್ಚು. ಈ ಕಾರಣದಿಂದ ಪ್ರತಿದಿನ ಪತಿಯ ಬಳಿ ತಪ್ಪದೇ 5 ರೂಪಾಯಿ ಕುರ್ಕುರೆ ತರುವಂತೆ ಹೇಳುತ್ತಿದ್ದಳು. ಆರಂಭದಲ್ಲಿ ಪತಿ ಪತ್ನಿ ಹೇಳಿದಂತೆ ಕುರ್ಕುರೆ ತಂದುಕೊಡುತ್ತಿದ್ದ ಆದರೆ ದಿನಗಳು ಕಳೆಯುತ್ತ ಹೋದಂತೆ ಪತಿ ಕೆಲಸದಲ್ಲಿ ನಿರತರಾಗಿದ್ದಾಗ, ಕುರ್ಕುರೆ ತರಲು …

Read More »

You cannot copy content of this page.