ಕಳೆದ ಕೆಲವು ದಿನಗಳಿಂದಲೂ ಕೇಸರಿ ಬಣ್ಣದ ವಸ್ತ್ರದ ಚರ್ಚೆಗಳು ಬಹಳ ಜೋರಾಗಿ ನಡೆದಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ಕಾಣಿಸಿಕೊಂಡಿರುವ ಸಿನಿಮಾ ಪಠಾಣ್. ಈ ಸಿನಿಮಾದಲ್ಲಿನ ಬೇಷರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಇಡೀ ದೇಶದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.
ಇಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಕೇಸರಿ ಬಣ್ಣವನ್ನು ಬಳಸಲಾಗಿದೆ ಎಂದು ಅನೇಕರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಅಭಿಯಾನ ಸಹಾ ಆರಂಭವಾಗಿದೆ. ದೀಪಿಕಾ ತೊಟ್ಟ ಕೇಸರಿ ಬಿ ಕಿ ನಿಯ ವಿಚಾರವೇ ದೊಡ್ಡ ಚರ್ಚೆ, ವಿವಾದಕ್ಕೆ ಕಾರಣವಾಗಿರುವಾಗಲೇ ಇನ್ನೊಂದು ಅಂಥದೇ ಘಟನೆ ನಡೆದಿದೆ.
ಇದೀಗ ಕೇಸರಿ ಬಣ್ಣದ ಬಟ್ಟೆಯಿಂದಾಗಿಯೇ ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ಬಾಲಿವುಡ್ ನಟಿ ಶಮಿತಾ ಶೆಟ್ಟಿ ಈಗ ಸಖತ್ ಸುದ್ದಿಯಾಗಿದ್ದಾರೆ. ಹೌದು ಶಮಿತಾ ಶೆಟ್ಟಿ ಇತ್ತೀಚಿಗೆ ಸಮಾರಂಭವೊಂದರಲ್ಲಿ ಭಾಗಿಯಾದ ವೇಳೆ ಧರಿಸಿದ್ದ ಕೇಸರಿ ಬಣ್ಣದ ಹೊಸ ವಿನ್ಯಾಸದ ಡ್ರೆಸ್ ನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಖತ್ ಸುದ್ದಿಯ ಜೊತೆಗೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.
ಇತ್ತೀಚಿಗೆ ಶಮಿತಾ ಶೆಟ್ಟಿ ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ನಟಿಯು ಕೇಸರಿ ಬಣ್ಣದ ಬ್ಯಾಕ್ ಲೆಸ್ ಗೌನ್ ಧರಿಸಿ ಬಂದಿದ್ದರು. ಈ ವಸ್ತ್ರದಲ್ಲಿ ನಟಿ ಬಹಳ ಸುಂದರವಾಗಿ ಕಂಡಿದ್ದರು. ಆದರೆ ಅದೇ ವೇಳೆ ಅವರು ಧರಿಸಿದ್ದ ವಸ್ತ್ರದ ವಿನ್ಯಾಸ ಸ್ವಲ್ಪ ಬೋಲ್ಡ್ ಆಗಿತ್ತು. ನಟಿ ಆ ಹೊಸ ವಿನ್ಯಾಸದ ಡ್ರೆಸ್ ನಲ್ಲಿ ಕ್ಯಾಮರಾ ಮುಂದೆ ಒಂದಷ್ಟು ಪೋಸ್ ಗಳನ್ನು ನೀಡಿದರು.
ಈ ವೀಡಿಯೋ ವೈರಲ್ ಆಗಿ ಲಕ್ಷಗಳ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಅಭಿಮಾನಿಗಳು ಲೈಕ್ ಗಳನ್ನು ನೀಡಿದ್ದಾರೆ. ಆದರೆ ವೀಡಿಯೋ ವೈರಲ್ ಆದ ನಂತರ ವೀಡಿಯೋ ನೋಡಿ ನೆಟ್ಟಿಗರು ಇದಕ್ಕೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ದೀಪಿಕಾ ನಂತರ ಈ ಶಮಿತಾ ಕೇಸರಿ ಬಣ್ಣಕ್ಕೆ ಅವಮಾನ ಮಾಡಲು ಹೊರಟಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ನಟಿಗೆ ತಮ್ಮ ಕಾಲುಗಳನ್ನು ಪ್ರದರ್ಶನ ಮಾಡುವ ಕಡೆಗೆ ಹೆಚ್ಚಿನ ಗಮನ ಎಂದು ವ್ಯಂಗ್ಯ ಮಾಡಿದ್ದಾರೆ. ಕೆಲವರು ನಟಿಯು ಕಿಟಕಿ ಕರ್ಟೈನ್ ಗಳನ್ನು ಧರಿಸಿ ಬಂದಿದ್ದಾರೆ. ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ನಾವು ಇದಕ್ಕಾಗಿಯೇ ಬಾಲಿವುಡ್ ನ ದ್ವೇ’ ಷ ಮಾಡುತ್ತೇವೆ ಎಂದೂ ಕಾಮೆಂಟ್ ಗಳನ್ನು ಮಾಡಿದ್ದಾರೆ.